ಹಳದಿಗಟ್ಟಿರುವ ಹಲ್ಲು ಬಿಳಿ ಮಾಡಲು ಉಪಾಯಗಳು

ನಗುವಾಗ ಹಲ್ಲು ಮಲ್ಲಿಗೆಯಂತೆ ಕಾಣಬೇಕು ಎಂಬುದು ಎಲ್ಲರ ಬಯಕೆಯಾಗಿರುತ್ತದೆ. ಆದರೆ ಹಲವು ಕಾರಣಗಳಿಂದ ಹಲ್ಲು ಹಳದಿಗಟ್ಟುತ್ತದೆ. ಹಾಗಿದ್ದರೆ ಹಳದಿಗಟ್ಟಿರುವ ಹಲ್ಲು ಬಿಳಿ ಮಾಡಲು ಉಪಾಯಗಳೇನು ನೋಡೋಣ.

credit: social media

ವಿಟಮಿನ್ ಸಿ ಅಂಶವಿರುವ ಹುಳಿ ರುಚಿಯ ಸ್ಟ್ರಾಬೆರಿ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ

ಆಹಾರದಲ್ಲಿ ವಿಟಮಿನ್ ಕೊರತೆಯಾಗದಂತೆ ಹಣ್ಣು, ತರಕಾರಿಗಳನ್ನು ಹೆಚ್ಚು ಬಳಿಕೆ ಮಾಡಿ

ಪ್ರತೀ ಬಾರಿ ಏನಾದರೂ ತಿಂದಾಗ ಮತ್ತು ಕುಡಿದಾಗ ಬ್ರಷ್ ಮಾಡುವುದನ್ನು ಮರೆಯಬೇಡಿ

ಆಪಲ್ ಸೈಡ್ ವಿನೇಗರ್ ಬಳಸಿ ನಿಯಮಿತವಾಗಿ ಬಾಯಿ ಮುಕ್ಕಳಿಸಿಕೊಳ್ಳಿ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿ ಕೆಲವು ನಿಮಿಷ ಇಟ್ಟುಕೊಳ್ಳಿ

ಬೇಕಿಂಗ್ ಸೋಡಾ ಬಳಸಿ ಹಳದಿಗಟ್ಟಿರುವ ಹಲ್ಲುಗಳನ್ನು ಬಿಳಿ ಮಾಡಲು ಪ್ರಯತ್ನಿಸಬಹುದು

ನೆನಪಿರಲಿ, ಯಾವುದೇ ಸಲಹೆ ಪಾಲಿಸುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯಿರಿ.