ಬೇಸಿಗೆಯಲ್ಲಿ ಕೂದಲು ವಾಸನೆ ಬರದಂತೆ ಟಿಪ್ಸ್

ಬೇಸಿಗೆಯಲ್ಲಿ ಬೆವರು ಇಂಗಿ ತಲೆಕೂದಲು ಬೇಗನೇ ಜಿಡ್ಡುಗಟ್ಟಿದಂತಾಗಿ ವಾಸನೆ ಬರುತ್ತಿರುತ್ತದೆ. ಅದಕ್ಕೆ ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Instagram

ಬೇಸಿಗೆಯಲ್ಲಿ ಬೆವರಿನಿಂದಾಗಿ ಒದ್ದೆಯಾಗುವ ಕೂದಲು ವಾಸನೆ ಬರುತ್ತದೆ

ಬೇಸಿಗೆಯಲ್ಲಿ ಎರಡು ದಿನಕ್ಕೊಮ್ಮೆ ತಲೆಸ್ನಾನ ಮಾಡುವುದು ಕಡ್ಡಾಯ

ತಲೆಸ್ನಾನ ಮಾಡಿದ ಬಳಿಕ ಪೂರ್ತಿ ಒಣಗಿದ ನಂತರವೇ ಕೂದಲು ಕಟ್ಟಿಕೊಳ್ಳಿ

ಸ್ನಾನ ಮಾಡುವ ನೀರಿಗೆ ದಾಸವಾಳದ ಎಲೆ, ಹೂಗಳನ್ನು ಜಜ್ಜಿ ಹಾಕಿ

ಒಂದು ಕಪ್ ಹದ ಬಿಸಿ ನೀರಿಗೆ ಎರಡು ಚಮಚ ನಿಂಬೆ ರಸ ಸೇರಿಸಿ ತಲೆಗೆ ಹಚ್ಚಿ

ಬಳಿಕ ಸ್ನಾನ ಮಾಡಿದರೆ ಕೂದಲಿನಿಂದ ಬೆವರಿನ ದುರ್ಗಂಧ ಹೋಗುತ್ತದೆ

ಕೂದಲು ಬಾಚುವ ಬಾಚಣಿಗೆಯನ್ನೂ ಸೋಪ್ ನೀರಿನಲ್ಲಿ ತೊಳೆದುಕೊಳ್ಳುತ್ತಿರಿ