ಕೆಲವೊಮ್ಮೆ ಅಕಸ್ಮತ್ತಾಗಿ ನಾವು ಸೇವಿಸುವ ಕಾಫಿ ಅಥವಾ ಚಹಾ ಬಟ್ಟೆಯ ಮೇಲೆ ಬಿದ್ದು ಕಲೆಯಾಗಿಬಿಡುತ್ತದೆ. ಅದರಲ್ಲೂ ಬಿಳಿ ಅಥವಾ ಪ್ಲೈನ್ ಬಟ್ಟೆಯ ಮೇಲೆ ಕಾಫಿ ಕಲೆಯಾದರೆ ಬಟ್ಟೆ ಹಾಳಾಗುತ್ತದೆ. ಹಾಗಿದ್ದರೆ ಕಲೆ ನಿವಾರಿಸುವುದು ಹೇಗೆ ನೋಡಿ.
Photo Credit: Social Media
ಬಟ್ಟೆ ಮೇಲೆ ಕಾಫಿ, ಚಹಾ ಬಿದ್ದ ತಕ್ಷಣವೇ ನೀರಿನಲ್ಲಿ ತೊಳೆದುಕೊಂಡರೆ ಕಲೆ ಬೇಗ ಹೋಗುತ್ತದೆ
ಕಲೆಯಾದ ಬಟ್ಟೆಯನ್ನು ಕೆಲವು ಸಮಯ ಬಿಸಿ ನೀರಿನಲ್ಲಿ ನೆನೆಸಿಟ್ಟು ತೊಳೆದರೆ ಉತ್ತಮ
ಕಲೆಯಾದ ತಕ್ಷಣವೇ ಕಲೆ ನಿವಾರಕ ದ್ರಾವಣದಲ್ಲಿ ಅದ್ದಿಟ್ಟು ಬಟ್ಟೆ ವಾಶ್ ಮಾಡಿಕೊಳ್ಳಿ
ವಿನೇಗರ್ ದ್ರಾವಣವನ್ನು ಕಲೆಯಾದ ಜಾಗಕ್ಕೆ ಹಾಕಿ ಬಟ್ಟೆ ತೊಳೆದುಕೊಂಡರೆ ಕಲೆ ಹೋಗುತ್ತದೆ
ಅಡುಗೆ ಸೋಡಾವನ್ನು ಕಲೆಯಾದ ಬಟ್ಟೆಗೆ ಬಳಸಿ ವಾಶ್ ಮಾಡಿದರೆ ಕಲೆ ಮಾಯವಾಗುತ್ತದೆ
ಕಲೆಯಾದ ಜಾಗಕ್ಕೆ ಕೊಂಚ ನಿಂಬೆ ರಸವನ್ನು ಹಾಕಿ ಬಳಿಕ ತೊಳೆದುಕೊಂಡು ನೋಡಿ
ಕಲೆಯಾದ ಬಟ್ಟೆಯನ್ನು ಆದಷ್ಟು ವಾಶಿಂಗ್ ಮೆಷಿನ್ ಗೆ ಹಾಕದೇ ಕೈಯಿಂದಲೇ ತೊಳೆದರೆ ಉತ್ತಮ