ಕಿಚನ್ ಸಿಂಕ್ ಬ್ಲಾಕ್ ಆಗಿದ್ದರೆ ಹೀಗೆ ಮಾಡಿ

ಅಡುಗೆ ಮನೆಯಲ್ಲಿ ನಾವು ಬಳಸುವ ಸಿಂಕ್ ಹೆಚ್ಚಾಗಿ ಕೆಲವು ಆಹಾರ ವಸ್ತುಗಳೋ, ತರಕಾರಿಯೋ ಸಿಕ್ಕಿ ಹಾಕಿಕೊಂಡು ಬ್ಲಾಕ್ ಆಗುತ್ತದೆ. ಇದನ್ನು ಸರಿಪಡಿಸಲು ಇಲ್ಲಿದೆ ಕೆಲವು ಟಿಪ್ಸ್.

Photo Credit: Social Media

ಕಿಚನ್ ಸಿಂಕ್ ನಲ್ಲಿ ಆಹಾರ ವಸ್ತುಗಳು ಸೇರಿಕೊಂಡು ಬ್ಲಾಕ್ ಆಗಿ ವಾಸನೆ ಬರಬಹುದು

ಇಂತಹ ಸಂದರ್ಭದಲ್ಲಿ ಸಿಂಕ್ ಗೆ ಕುದಿಯುವಷ್ಟು ಬಿಸಿ ನೀರನ್ನು ಚೆನ್ನಾಗಿ ಬಿಡಿ

ಆದಷ್ಟು ಕಿಚನ್ ಸಿಂಕ್ ಗೆ ಆಹಾರದ ತುಣುಕುಗಳನ್ನು ಬೀಳದಂತೆ ನೋಡಿಕೊಳ್ಳಿ

ಕಿಚನ್ ಸಿಂಕ್ ಒಳಗೆ ತೂರಬಹುದಾದ ಕೋಲು ಬಳಸಿ ಕಸ ಕಡ್ಡಿಯನ್ನು ನಿವಾರಿಸಬಹುದು

ಕಿಚನ್ ಸಿಂಕ್ ಗೆ ಕೊಂಚ ಬಾತ್ ರೂಂ ತೊಳೆಯುವ ಆಸಿಡ್ ಬಳಸಿ ಕ್ಲೀನ್ ಮಾಡಿ

ಸ್ವಲ್ಪ ಬೇಕಿಂಗ್ ಸೋಡಾ ಮತ್ತು ವಿನೇಗರ್ ಮಿಶ್ರಣ ಮಾಡಿದ ನೀರು ಹಾಕಿ ಕ್ಲೀನ್ ಮಾಡಿ

ಸಿಂಕ್ ನ ಪೈಪ್ ಗೆ ಒತ್ತಡ ಬೀಳುವಷ್ಟು ರಭಸವಾಗಿ ನೀರು ಹಾಯಿಸಿ ಕಸ ತಳ್ಳಬಹುದು