ಜಿಡ್ಡು ಹಿಡಿದ ತವಾ ಕ್ಲೀನ್ ಮಾಡಲು ಟಿಪ್ಸ್

ಪ್ರತಿನಿತ್ಯ ಬಳಸುವ ದೋಸೆ ತವಾ ಎಣ್ಣೆಯ ಜಿಡ್ಡು ಹಿಡಿದು ತೊಳೆದರೆ ಬೇಗನೇ ಜಿಡ್ಡು ಹೋಗದ ಪರಿಸ್ಥಿತಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಅದನ್ನು ಕ್ಲೀನ್ ಮಾಡುವುದು ಹೇಗೆ ಎಂದು ಇಲ್ಲಿದೆ ಟಿಪ್ಸ್ ನೋಡಿ.

Photo Credit: Instagram

ಕಾವಲಿಯಲ್ಲಿ ಎಣ್ಣೆಯ ಜಿಡ್ಡು ಇದ್ದಾಗ ಅದನ್ನು ಬೇಕಿಂಗ್ ಸೋಡಾ ಬಳಸಿ ಕ್ಲೀನ್ ಮಾಡಬಹುದು

ಮೊದಲು ಬೇಕಿಂಗ್ ಸೋಡಾ ದ್ರಾವಣವನ್ನು ತವಾ ಮೇಲೆ ಚೆನ್ನಾಗಿ ಚಿಮುಕಿಸಿ

ಬಳಿಕ ವಿನೇಗರ್ ದ್ರಾವಣವನ್ನು ಅದರ ಮೇಲೆ ಹಾಕಿಕೊಂಡು ಚೆನ್ನಾಗಿ ಒರೆಸಿ

ಇದನ್ನು ಸ್ಪಾಂಜ್ ನಿಂದ ಚೆನ್ನಾಗಿ ತಿಕ್ಕಿ ತೊಳೆದು ಹದ ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ

ಇದಲ್ಲದಿದ್ದರೆ ಮೊದಲು ಕಾವಲಿಯನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿಕೊಳ್ಳಿ

ಬಿಸಿಯಾದ ಕಾವಲಿಗೆ ಸ್ವಲ್ಪ ಸೋಪು ನೀರು ಹಾಕಿಕೊಂಡು ಚೆನ್ನಾಗಿ ಕುದಿಸಿ

ಬಳಿಕ ಅದನ್ನು ಆರಲು ಬಿಟ್ಟು ಬಳಿಕ ತೊಳೆದುಕೊಂಡರೆ ಜಿಡ್ಡು ಮಾಯವಾಗುವುದು