ದೇವರ ದೀಪದಿಂದ ಎಣ್ಣೆ ಜಿಡ್ಡು ತೆಗೆಯಲು ಟಿಪ್ಸ್

ದೇವರಿಗೆ ಹಚ್ಚುವ ದೀಪವನ್ನು ವಾರಕ್ಕೊಮ್ಮೆಯಾದರೂ ಕ್ಲೀನ್ ಮಾಡುತ್ತಿರಬೇಕು. ಆದರೆ ದೀಪದ ಎಣ್ಣೆಯ ಜಿಡ್ಡು ತೆಗೆಯುವುದು ಅಷ್ಟು ಸುಲಭವಲ್ಲ. ದೇವರ ದೀಪದಿಂದ ಜಿಡ್ಡು ತೆಗೆಯಲು ಇಲ್ಲಿದೆ ಕೆಲವು ಟಿಪ್ಸ್.

Photo Credit: AI image

ದೇವರ ಮನೆಯಲ್ಲಿ ಹಚ್ಚುವ ದೀಪವನ್ನು ಶುಚಿಯಾಗಿಟ್ಟುಕೊಳ್ಳಬೇಕು

ದೀಪದ ಎಣ್ಣೆ ಮತ್ತು ಟ್ರೇಯನ್ನು ಬಿಸಿ ನೀರಿನಲ್ಲಿ ಕೆಲವು ಕ್ಷಣ ನೆನೆಸಿಡಿ

ಬಿಸಿ ನೀರಿಗೆ ಸ್ವಲ್ಪ ವಿನೇಗರ್ ಮತ್ತು ಬೇಕಿಂಗ್ ಸೋಡಾ ಹಾಕಿ ದೀಪ ತೊಳೆಯಿರಿ

ಬಿಸಿ ನೀರು ಹಾಕಿದ ಬಳಿಕ ಹುಣಸೆ ಹುಳಿಯಿಂದ ದೀಪ ತೊಳೆದರೆ ಜಿಡ್ಡು ಹೋಗುತ್ತದೆ

ಜಿಡ್ಡು ಇರುವ ದೀಪಕ್ಕೆ ನಿಂಬೆ ರಸ ಹಾಕಿ ತಿಕ್ಕಿ ಬಳಿಕ ಸೋಪ್ ಹಾಕಿ ತೊಳೆಯಬಹುದು

ಬೇಕಿಂಗ್ ಸೋಡಾವನ್ನು ನೀರು ಹಾಕಿ ಪೇಸ್ಟ್ ಮಾಡಿ ಅದರಿಂದ ದೀಪ ತೊಳೆಯಿರಿ

ಜಿಡ್ಡು ಇರುವ ದೀಪಕ್ಕೆ ಬೂದಿ ಹಾಕಿ ಚೆನ್ನಾಗಿ ತಿಕ್ಕಿದ ಬಳಿಕ ಬಿಸಿ ನೀರಿನಿಂದ ತೊಳೆಯಬಹುದು