ಬೆಳ್ಳಿ ವಸ್ತುಗಳನ್ನು ನಿರಂತರವಾಗಿ ಬಳಸುತ್ತಿದ್ದರೆ ಅದು ಬಣ್ಣ ಮಾಸುತ್ತದೆ ಅಥವಾ ಕಪ್ಪಗಾಗುತ್ತದೆ. ಬೆಳ್ಳಿಯ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿ ಅದಕ್ಕೆ ಮೊದಲಿನ ಹೊಳಪು ಬರುವಂತೆ ಮಾಡಲು ಇಲ್ಲಿದೆ ಕೆಲವು ಟ್ರಿಕ್ಸ್.
Photo Credit: Social Media
ಬೆಳ್ಳಿ ಪಾತ್ರೆ ಅಥವಾ ಬೆಳ್ಳಿ ಕಾಲ್ಗೆಜ್ಜೆ ಇದ್ದರೆ ಅದನ್ನು ಕೆಲವು ಹೊತ್ತು ಸೋಪ್ ನೀರಿನಲ್ಲಿ ನೆನೆಸಿಡಿ
ಬಳಿಕ ಇದನ್ನು ಟೂತ್ ಪೇಸ್ಟ್ ನ್ನು ಹಚ್ಚಿದ ಟೂತ್ ಬ್ರಷ್ ನಿಂದ ಚೆನ್ನಾಗಿ ತೊಳೆಯಿರಿ
ಬೇಕಿಂಗ್ ಸೋಡಾ ದ್ರಾವಣದಲ್ಲಿ ಕೆಲವು ಹೊತ್ತು ಬೆಳ್ಳಿ ವಸ್ತುವನ್ನು ನೆನಸಿಟ್ಟು ತೊಳೆದರೆ ಬೆಳ್ಳಗಾಗುತ್ತದೆ
ನಿಂಬೆ ಹಣ್ಣಿನ ದ್ರಾವಣ ಮಾಡಿ ಅದರಲ್ಲಿ ಬೆಳ್ಳಿ ವಸ್ತು ನೆನೆಸಿಟ್ಟು ತೊಳೆದರೆ ಮೊದಲಿನ ಹೊಳಪು ಬರುತ್ತದೆ
ಅಂಟುವಾಳ ಕಾಯಿಯ ನೀರಿನಲ್ಲಿ ಬೆಳ್ಳಿ ಸಾಮಾನುಗಳನ್ನು ನೆನೆಸಿಟ್ಟು ತೊಳೆದರೆ ಶುಭ್ರವಾಗುತ್ತದೆ
ವಿನೇಗರ್ ಮತ್ತು ಬೇಕಿಂಗ್ ಸೋಡಾ ಮಿಶ್ರಣ ಮಾಡಿದ ದ್ರಾವಣದಿಂದ ಬೆಳ್ಳಿ ಸಾಮಾನು ತೊಳೆಯಬಹುದು
ಸಾಮಾನ್ಯ ಡಿಶ್ ವಾಶ್ ನಿಂದಲೂ ಟೂತ್ ಬ್ರಷ್ ಬಳಸಿ ಚೆನ್ನಾಗಿ ಉಜ್ಜಿದರೆ ಬೆಳ್ಳಿ ವಸ್ತು ಶುಚಿಯಾಗುತ್ತದೆ