ವಾಶ್ ಬೇಸಿನ್ ಫಳ ಫಳ ಹೊಳೆಯಬೇಕಾದರೆ ಹೀಗೆ ಮಾಡಿ

ನಾವು ಪ್ರತಿನಿತ್ಯ ಬಳಸುವ ವಾಶ್ ಬೇಸಿನ್ ಕ್ಲೀನ್ ಇಲ್ಲದೇ ಇದ್ದರೆ ಅದರಿಂದಲೂ ರೋಗಗಳು ಹರಡುವ ಸಾಧ್ಯತೆಯಿದೆ. ವಾಶ್ ಬೇಸಿನ್ ಸ್ವಚ್ಛವಾಗಿ ಆರೋಗ್ಯಕರವಾಗಿರಿಸಲು ಏನು ಮಾಡಬೇಕು, ಹೇಗೆ ತೊಳೆಯಬೇಕು ಎಂದು ಇಲ್ಲಿದೆ ಟಿಪ್ಸ್.

Photo Credit: Instagram, WD

ಬ್ರಷ್ ಅಥವಾ ಸ್ಪಾಂಜ್ ಬಳಸಿ ಪ್ರತಿನಿತ್ಯ ವಾಶ್ ಬೇಸಿನ್ ನ್ನು ತೊಳೆದುಕೊಂಡರೆ ಆರೋಗ್ಯಕರವಾಗಿರುತ್ತದೆ

ವಾಶ್ ಬೇಸಿನ್ ನ್ನು ಸೋಪ್ ನೀರಿನಲ್ಲಿ ಕೆಲವು ಸಮಯ ನೆನೆಸಿ ಬಳಿಕ ಬ್ರಷ್ ನಿಂದ ಕ್ಲೀನ್ ಮಾಡಿ

ವಾಶ್ ಬೇಸಿನ್ ಗೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ 10 ನಿಮಿಷ ಬಿಟ್ಟು ಬ್ರಷ್ ಮಾಡಿ

ವಾಶ್ ಬೇಸಿನ್ ನಿಂದ ಕಲೆಹೋಗಬೇಕಾದರೆ ನಿಂಬೆ ರಸ ಹಾಕಿ ತೊಳೆಯಬಹುದು

ಬ್ಲೀಚ್ ಅಥವಾ ಆಸಿಡ್ ಹಾಕಿ ತೊಳೆದರೆ ವಾಶ್ ಬೇಸಿನ್ ಗೆ ಹಾನಿಯಾಗುವ ಸಾಧ್ಯತೆಯಿದೆ

ಸ್ಟೀಲ್ ಸ್ಕ್ರಬರ್ ಬದಲು ಸ್ಪಾಂಜ್ ಅಥವಾ ಮೃದುವಾದ ಬ್ರಷ್ ಬಳಸಿ ತೊಳೆಯಬೇಕು

ಕೊಂಚ ವಿನೇಗರ್ ಸಿಂಪಡಿಸಿ 10 ನಿಮಿಷ ಬಿಟ್ಟು ಸ್ಪಾಂಜ್ ನಿಂದ ಒರೆಸಿ ಕ್ಲೀನ್ ಮಾಡಿ