ನಾವು ಪ್ರತಿನಿತ್ಯ ಬಳಸುವ ನೀರಿನ ಬಾಟಲಿಯನ್ನು ಶುದ್ಧವಾಗಿಟ್ಟುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಬಾಟಲಿಯೇ ಕೊಳಕಾಗಿದ್ದರೆ ಅದರಿಂದಲೇ ರೋಗ ಹರಡಬಹುದು. ನೀರಿನ ಬಾಟಲಿ ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್.
Photo Credit: Social Media
ಪ್ರತಿನಿತ್ಯ ನೀರು ಹಾಕಿಡುವ ಬಾಟಲಿ ಸರಿಯಾಗಿ ತೊಳೆಯದೇ ಇದ್ದರೆ ಫಂಗಸ್ ಬರಬಹುದು
ಪ್ರತಿನಿತ್ಯ ನೀರಿನ ಬಾಟಲಿಯನ್ನು ತೊಳೆದ ಬಳಿಕ ನೀರು ಸಂಪೂರ್ಣವಾಗಿ ಆರುವಂತೆ ತೆರೆದಿಡಿ
ನೀರಿನ ಬಾಟಲಿಗೆ ಸ್ವಲ್ಪ ಬಿಸಿ ನೀರು ಹಾಕಿ ಚೆನ್ನಾಗಿ ಕಲಕಿ ತೊಳೆದುಕೊಂಡರೆ ಉತ್ತಮ
ನೀರಿನ ಬಾಟಲಿಗೆ ಸ್ವಲ್ಪ ಕಾಗದ ಚೂರುಗಳನ್ನು ಹಾಕಿ ತೊಳೆದರೆ ಬಾಟಲಿ ಬೆಳ್ಳಗಾಗುತ್ತದೆ
ನೀರಿನ ಬಾಟಲಿ ಕೊಳೆ ಅಂಟಿಕೊಂಡು ಕಪ್ಪಾಗಿದ್ದರೆ ನೀರಿಗೆ ಮರಳು ಹಾಕಿ ಚೆನ್ನಾಗಿ ಕಲಕಿ ತೊಳೆಯಿರಿ
ಬಾಟಲಿಯ ಮುಚ್ಚಳಗಳಲ್ಲಿ ಕಪ್ಪು ಕೊಳಕಾಗಿದ್ದರೆ ಟೂತ್ ಬ್ರಷ್ ಬಳಸಿ ತೊಳೆಯಿರಿ
ಬಾಟಲಿಗೆ ಸ್ವಲ್ಪ ವಿನೇಗರ್ ಮತ್ತು ನೀರು ಸೇರಿಸಿ ಚೆನ್ನಾಗಿ ಕಲಕಿ ಬ್ರಷ್ ನಿಂದ ತೊಳೆಯಿರಿ