ಮಿಕ್ಸಿ ಗ್ರೈಂಡರ್ ಕಲೆಯನ್ನು ಕ್ಲೀನ್ ಹೀಗೆ ಮಾಡಿ

ನಾವು ಪ್ರತಿನಿತ್ಯ ರುಬ್ಬಲು ಬಳಸುವ ಮಿಕ್ಸಿ ಗ್ರೈಂಡರ್ ನಲ್ಲಿ ಮಸಾಲ ಪದಾರ್ಥಗಳ ಕಲೆ, ಜಿಡ್ಡು ಅಂಟಿಕೊಳ್ಳುವುದು ಸಹಜ. ಆದರೆ ಇದರಿಂದ ಮಿಕ್ಸಿ ಹೊಳಪು ಕಳೆದುಕೊಂಡು ಅಸಹ್ಯವಾಗಿ ಕಾಣುತ್ತಿದ್ದರೆ ಅದನ್ನು ಕ್ಲೀನ್ ಮಾಡಲು ಇಲ್ಲಿದೆ ಸುಲಭ ಟೆಕ್ನಿಕ್.

Photo Credit: Social Media

ಮಿಕ್ಸಿಯಲ್ಲಿರುವ ಕಲೆ ಹೋಗಲಾಡಿಸಲು ನಿಂಬೆ ಹಣ್ಣಿನ ಸಿಪ್ಪೆಯನ್ನು ಬಳಸಬಹುದು

ನಿಂಬೆ ಹಣ್ಣಿನ ಸಿಪ್ಪೆಯಿಂದ ಕಲೆಯಿರುವ ಜಾಗದಲ್ಲಿ ಚೆನ್ನಾಗಿ ಉಜ್ಜಿ 15 ನಿಮಿಷ ಬಿಟ್ಟು ತೊಳೆಯಿರಿ

ಎರಡು ಸ್ಪೂನ್ ವಿನೇಗರ್ ನ್ನು ಸ್ವಲ್ಪ ನೀರಿಗೆ ಹಾಕಿ ದ್ರಾವಣ ಮಾಡಿಕೊಟ್ಟುಕೊಳ್ಳಿ

ಈ ವಿನೇಗರ್ ದ್ರಾವಣದಿಂದ ಮಿಕ್ಸಿಯನ್ನು ತೊಳೆದುಕೊಂಡರೆ ಕಲೆ ಮಾಯವಾಗಿ ಹೊಳಪು ಬರುತ್ತದೆ

ಮನೆಯಲ್ಲಿ ನಾವು ಸಾಮಾನ್ಯವಾಗಿ ಬಳಸುವ ಸೋಪ್ ವಾಟರ್ ನಿಂದಲೂ ಕಲೆ ಹೋಗಲಾಡಿಸಬಹುದು

ಡಿಟರ್ಜೆಂಟ್ ನೀರಿನಲ್ಲಿ ಅದ್ದಿ ಸ್ಕ್ರಬರ್ ನಿಂದ ಕಲೆಯಿರುವ ಜಾಗವನ್ನು ತೊಳೆದುಕೊಳ್ಳಿ

ಬೇಕಿಂಗ್ ಸೋಡಾ ಮತ್ತು ನೀರು ಮಿಕ್ಸ್ ಮಾಡಿ ಆ ನೀರಿನಲ್ಲಿ ಬಟ್ಟೆ ಅದ್ದಿ ಮಿಕ್ಸಿ ಒರೆಸಿದರೂ ಕ್ಲೀನ್ ಆಗುತ್ತದೆ