ಇನ್ನೇನು ಬೇಸಿಗೆ ಬರುತ್ತಿದ್ದು, ಈಗಾಗಲೇ ಸೂರ್ಯ ನೆತ್ತಿ ಮೇಲೆ ಕೆಂಡದಂತೆ ಸುಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಹೆಚ್ಚಿನವರು ಬಾಡಿ ಹೀಟ್ ನಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಬಾಡಿ ಹೀಟ್ ಕಡಿಮೆ ಮಾಡಲು ಯಾವೆಲ್ಲಾ ಆಹಾರ ಸೇವಿಸಬೇಕು ನೋಡಿ.
credit: social media
ಸುಡು ಬಿಸಿಲಿನ ವಾತಾವರಣ ಮತ್ತು ಆಹಾರದಿಂದಾಗಿ ದೇಹದ ಉಷ್ಣತೆ ಹೆಚ್ಚಾಗಬಹುದು.
ಇಂತಹ ಸಂದರ್ಭದಲ್ಲಿ ದೇಹದ ಉಷ್ಣತೆ ಕಡಿಮೆ ಮಾಡಿ ತಂಪು ಮಾಡಲು ಕೆಲವು ಆಹಾರ, ಪಾನೀಯ ಸಹಾಯ ಮಾಡುತ್ತದೆ.
ಬೇಸಿಗೆಯ ತಾಪ ಕಡಿಮೆ ಮಾಡಿ ದೇಹ ತಂಪಗಾಗಿಸಲು ಎಳೆ ನೀರು ಸೇವಿಸುವುದನ್ನು ಮರೆಯಬೇಡಿ.
ಪ್ರತಿನಿತ್ಯ ಸ್ನಾನದ ಸಂದರ್ಭದಲ್ಲಿ 10 ನಿಮಿಷ ಬಿಡುವು ಮಾಡಿಕೊಂಡು ತಣ್ಣೀರಿನಲ್ಲಿ ಕಾಲು ಮುಳುಗಿಸಿಡಿ.
ಹೆಚ್ಚು ನೀರಿನಂಶವಿರುವ ಹಣ್ಣುಗಳಾದ ಕಲ್ಲಂಗಡಿ ಹಣ್ಣನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ.
ಸೌತೆಕಾಯಿ, ಸೋರೆಕಾಯಿ, ಎಲೆಕೋಸಿನಂತಹ ತರಕಾರಿಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿ.
ಎಳ್ಳು ನೆನೆಸಿದ ನೀರು, ಬಾರ್ಲಿ ನೀರು ಅಥವಾ ಸಬ್ಬಕ್ಕಿ ನೀರನ್ನು ಸೇವಿಸಿದರೆ ದೇಹ ತಂಪಗಾಗುವುದು.