ಮನೆಯಲ್ಲಿ ತಾರಸಿಯಲ್ಲೇ ಲಿಂಬೆ ಗಿಡ ಬೆಳೆಸಲು ಟಿಪ್ಸ್

ಇತ್ತೀಚೆಗೆ ಲಿಂಬೆ ಬಲುದುಬಾರಿಯಾಗಿದೆ. ಆದರೆ ಮನೆಯ ತಾರಸಿಯಲ್ಲಿಯೇ ನಿಂಬೆ ಗಿಡವನ್ನು ಬೆಳೆಸಬಹುದೇ ಎಂದು ಅನೇಕರಿಗೆ ಪ್ರಶ್ನೆಯಿರುತ್ತದೆ. ಖಂಡಿತವಾಗಿಯೂ ನಿಮ್ಮ ತಾರಸಿಯಲ್ಲೂ ನಿಂಬೆ ಗಿಡ ಬೆಳೆಸಬಹುದು, ಹೇಗೆ ಇಲ್ಲಿದೆ ಟಿಪ್ಸ್.

Photo Credit: Social Media

ನಿಂಬೆ ಗಿಡ ಬೆಳೆಸಲು ಸುಮಾರು 20 ಇಂಚಿನ ಅಗಲವಾದ ಮಣ್ಣಿನ ಪಾಟ್ ಇಟ್ಟುಕೊಳ್ಳಿ

ನರ್ಸರಿಯಿಂದ ಒಳ್ಳೆಯ ತೆಳುವಾದ ಸಿಪ್ಪೆ ಬರುವ ತಳಿಯ ನಿಂಬೆ ಗಿಡ ಮತ್ತು ಗೊಬ್ಬರ ತನ್ನಿ

ಪಾಟ್ ಗೆ ಮಣ್ಣು ಮತ್ತು ಗೊಬ್ಬರ ತಂದು ಹಾಕಿ ನಿಂಬೆ ಗಿಡವನ್ನು ಅದರಲ್ಲಿ ಹಾಕಿ

ನಿಂಬೆ ಗಿಡದ ಬೇರು ಹರಡಲು ಜಾಗ ಬೇಕು ಅದಕ್ಕಾಗಿ ಅಗಲವಾದ ಪಾಟ್ ಸೂಕ್ತ

ಆದಷ್ಟು ನಿಂಬೆ ಗಿಡಕ್ಕೆ ಹನಿ ಹನಿಯಾಗಿ ನೀರು ಬೀಳುವಂತೆ ನೋಡಿಕೊಳ್ಳಿ

ನಿಂಬೆ ಗಿಡಕ್ಕೆ ಆದಷ್ಟು ರಾಸಾಯನಿಕ ಬಳಸದೇ ಸಾವಯವ ಗೊಬ್ಬರವನ್ನೇ ಹಾಕಿದರೆ ಗಿಡ ಚೆನ್ನಾಗಿರುತ್ತದೆ

ಗಿಡವನ್ನು ಸರಿಯಾಗಿ ಆರೈಕೆ ಮಾಡುತ್ತಿದ್ದರೆ ಒಂದರಿಂದ ಎರಡು ವರ್ಷದಲ್ಲಿ ಫಲ ಕೊಡಬಹುದು