ಗುಲಾಬಿ ಹೂ ಅತ್ಯಂತ ಸುಂದರ ಹೂ. ಅದರ ಗಿಡ ಮನೆಗೆ ತಂದು ನೆಟ್ಟರೂ ಅದು ಚೆನ್ನಾಗಿ ಹೂ ಬಿಡುವುದಿಲ್ಲ ಇಲ್ಲಾ ಒಣಗಿಹೋಗುತ್ತದೆ ಎಂಬ ಚಿಂತೆಯಿರುತ್ತದೆ. ಹಾಗಿದ್ದರೆ ಗುಲಾಬಿ ಗಿಡ ಚೆನ್ನಾಗಿ ಆಗಲು ಏನು ಮಾಡಬೇಕು ನೋಡಿ.
Photo Credit: Facebook, AI image,WD
ಗುಲಾಬಿ ಗಿಡದ ಕಾಂಡ ನೆಡುವುದಿದ್ದರೆ ಹೆಚ್ಚು ಬಲಿತ ಕಾಂಡವನ್ನೇ ಆಯ್ಕೆ ಮಾಡಿಕೊಳ್ಳಬೇಕು
ಕಾಂಡದ ತುದಿಗೆ ಸ್ವಲ್ಪ ದನದ ಸೆಗಣಿಯನ್ನು ಹಚ್ಚಿ ನೆಟ್ಟರೆ ಬೇಗನೇ ಚಿಗುರೊಡೆಯುತ್ತದೆ
ಪಾಟ್ ನಲ್ಲಿ ಸ್ವಲ್ಪ ಸಡಿಲವಾಗಿ ಮಣ್ಣು ಹಾಕಿ ಸಾವಯವ ಗೊಬ್ಬರವನ್ನು ಹಾಕಬೇಕು
ಪಾಟ್ ನಲ್ಲಿ ಗುಲಾಬಿ ಗಿಡ ನೆಟ್ಟರೆ ಅದರ ಬುಡಕ್ಕೆ ಮಾತ್ರವಲ್ಲ, ಮೇಲೆಯೂ ನೀರು ಸ್ಪ್ರೇ ಮಾಡಬೇಕು
ಕಾಂಡದ ತಲೆಗೆ ಅರಿಶಿನ ಪುಡಿ ಹಾಕಿದರೆ ಬೇಗನೇ ಚಿಗುರೊಡೆಯುವುದಲ್ಲದೆ ಗಿಡ ಚೆನ್ನಾಗಿ ಆಗುತ್ತದೆ
ಹೂ ಚೆನ್ನಾಗಿ ಬಿಡಬೇಕೆಂದರೆ ಚಹಾ ಮಾಡಿ ಉಳಿದ ಪುಡಿಯನ್ನು ನೆನಸಿಟ್ಟು ನೀರು ಸಮೇತ ಹಾಕಿ
ಈರುಳ್ಳಿ ಮತ್ತು ನೆಲಗಡಲೆಯ ಸಿಪ್ಪೆಯನ್ನು ಬುಡಕ್ಕೆ ಹಾಕಿದರೆ ಗುಲಾಬಿ ಹೂಡ ಬಿಡುತ್ತದೆ