ಹೆಚ್ಚಿನವರ ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಆದರೆ ಕೆಲವರಿಗೆ ಏನೇ ಮಾಡಿದರೂ ತುಳಸಿ ಗಿಡ ಚೆನ್ನಾಗಿ ಬರುತ್ತಿಲ್ಲ ಎಂಬ ಬೇಸರವಿರುತ್ತದೆ. ಹಾಗಿದ್ದರೆ ತುಳಸಿ ಗಿಡ ಚೆನ್ನಾಗಿ ಬರಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.
Photo Credit: WD, AI Image
ತುಳಸಿ ಗಿಡವನ್ನು ಆದಷ್ಟು ಅಗಲವಾದ ಪಾಟ್ ನಲ್ಲಿ ಬೆಳೆಸಿದರೆ ಉತ್ತಮ
ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರು ಹಾಕುವುದರ ಜೊತೆ ಬಿಸಿಲು ಬರುವ ಜಾಗದಲ್ಲೇ ಇಡಬೇಕು
ಎರಡು ಚಮಚ ಕಾಫಿ ಪೌಡರ್ ನ್ನು ಒಂದ ಗ್ಲಾಸ್ ನೀರಲ್ಲಿ ನೆನೆಹಾಕಿ ಬೆಳಿಗ್ಗೆ ತುಳಸಿ ಗಿಡಕ್ಕೆ ಹಾಕಿ
ತುಳಸಿ ಗಿಡಕ್ಕೆ ದನದ ಸೆಗಣಿ ಅಥವಾ ಸಾವಯವ ಗೊಬ್ಬರ ಬಳಸಿದರೆ ಚೆನ್ನಾಗಿ ಬೆಳೆಯುತ್ತದೆ
ತುಳಸಿ ಗಿಡಕ್ಕೆ ನೀರು ಅತಿಯೂ ಆಗಬಾರದು, ಕಡಿಮೆಯೂ ಆಗದಂತೆ ನೋಡಿಕೊಳ್ಳಬೇಕು
ತುಳಸಿ ಗಿಡದಲ್ಲಿ ಹೂ ಬಂದಾಗ ಅದನ್ನು ಆಗಾಗ ಕತ್ತರಿಸುತ್ತಿದ್ದರೆ ಗಿಡ ಚೆನ್ನಾಗಿ ಬೆಳೆಯುತ್ತದೆ
ತುಳಸಿಗಿಡವನ್ನು ಆದಷ್ಟು ಕೆಂಪು ಮಣ್ಣಿನಲ್ಲಿ ನೆಟ್ಟರೆ ಚೆನ್ನಾಗಿ ಬೆಳೆಯುತ್ತದೆ