ನಮ್ಮ ಉಸಿರಾಟ ಪ್ರಕ್ರಿಯೆಯ ಪ್ರಧಾನ ಅಂಗಗಳಲ್ಲಿ ಶ್ವಾಸಕೋಶ ಮೊದಲನೆಯದು. ಶ್ವಾಸಕೋಶ ಸಮಸ್ಯೆಗಳು ಒಬ್ಬ ವ್ಯಕ್ತಿಯ ಜೀವಕ್ಕೇ ಅಪಾಯ ತರಬಹುದು. ಶ್ವಾಸಕೋಶ ಆರೋಗ್ಯವಾಗಿರಬೇಕಾದರೆ ಯಾವೆಲ್ಲಾ ಆರೋಗ್ಯಕರ ಅಭ್ಯಾಸವಿರಬೇಕು ನೋಡಿ.
Photo Credit: Social Media
ಧೂಮಪಾನ ಮಾಡುವ ಅಭ್ಯಾಸವಿದ್ದರೆ ಮೊದಲು ಅದನ್ನು ತ್ಯಜಿಸಿ, ಆರೋಗ್ಯವಾಗಿರಿ
ಅತಿಯಾದ ಧೂಳು, ಹೊಗೆ ಸಹಿತ ಮಾಲಿನ್ಯಯುಕ್ತ ಪರಿಸರದಲ್ಲಿ ಓಡಾಡುವುದನ್ನು ಕಡಿಮೆ ಮಾಡಿ
ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮತ್ತು ಆರೋಗ್ಯಕರ ಆಹಾರ ಅಭ್ಯಾಸ ಬೆಳೆಸಿಕೊಳ್ಳಿ
ಸಮಯ ಸಿಕ್ಕಾಗಲೆಲ್ಲಾ ಪ್ರಕೃತಿ ಮಧ್ಯೆ ನಿಂತು ಶುದ್ಧ ಗಾಳಿ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿ
ಉಸಿರಾಟದ ವ್ಯಾಯಾಮ ಅಥವಾ ಪ್ರಾಣಾಯಾಮದಂತಹ ಸುಲಭ ಯೋಗ ವಿಧಾನವನ್ನು ಮಾಡಿ
ಪ್ರತಿನಿತ್ಯ ವಾಕಿಂಗ್, ಜಾಗಿಂಗ್ ನಂತಹ ಸರಳ ವ್ಯಾಯಾಮಗಳನ್ನು ಮಾಡುತ್ತಿದ್ದರೆ ಉತ್ತಮ
ನೆನಪಿರಲಿ, ಕಫ, ಉಸಿರಾಟದ ಸಮಸ್ಯೆ ಅತಿಯಾಗಿ ಇದ್ದಾಗ ತಡಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸಿ.