ಗಿಡಗಳು ಬಾಡಿದಂತಾಗಿದ್ದರೆ ಈ ಟ್ರಿಕ್ಸ್ ಮಾಡಿ ನೋಡಿ

ಪಾಟ್ ನಲ್ಲಿ ಮಾಡಿರುವ ಗಿಡ ಎಷ್ಟೇ ನೀರು, ಗೊಬ್ಬರ ಹಾಕಿದರೂ ಬಾಡಿದಂತಾಗುತ್ತಿದ್ದರೆ ಅದನ್ನು ನಳನಳಿಸುವಂತೆ ಮಾಡಲು ಕೆಲವು ಸುಲಭ ಉಪಾಯಗಳಿವೆ. ಗಿಡಗಳು ಮತ್ತೆ ಜೀವ ಕಳೆ ಬಂದಂತೆ ಆಗಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Instagram, AI Image

ಕೆಲವೊಂದು ಪೋಷಕಾಂಶದ ಕೊರತೆಯಿಂದ ಗಿಡಗಳು ತನ್ನಿಂದ ತಾನೇ ಬಾಡಿದಂತಾಗಬಹುದು

ಒಂದು ವೇಳೆ ಹುಳವಾಗಿದ್ದರೆ ಅದಕ್ಕೆ ಔಷಧ ಸ್ಪ್ರೇ ಮಾಡಿ ಹೋಗಲಾಡಿಸಬಹುದು

ವಿನಾಕಾರಣ ಬಾಡಿದರೆ ಅರ್ಧ ಲೋಟ ಹಾಲಿಗೆ ಒಂದು ಲೋಟ ನೀರು ಹಾಕಿ ಬುಡಕ್ಕೆ ಹಾಕಿ

ಅಡುಗೆ ಮನೆಯಲ್ಲಿ ಬಳಸುವ ಆಲೂಗಡ್ಡೆ ಸಿಪ್ಪೆಯನ್ನು ನೆನೆಹಾಕಿದ ನೀರು ಬುಡಕ್ಕೆ ಹಾಕಿ

ಸ್ವಲ್ಪ ಡ್ರೈ ಈಸ್ಟ್ ತಂದು ಅದನ್ನು ಒಂದು ಲೋಟ ನೀರಿಗೆ ಹಾಕಿ ಮಿಕ್ಸ್ ಮಾಡಿ ಗಿಡಕ್ಕೆ ಹಾಕಿ

ಪಾಟ್ ನಲ್ಲಿರುವ ಗಿಡದ ಬುಡಕ್ಕೆ ಸ್ವಲ್ಪ ಬೈಕಾರ್ಬೋನೇಟ್ ಹಾಕಿದರೆ ನಳನಳಿಸುತ್ತದೆ

ಬಾಳೆಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ನೆನೆ ಹಾಕಿ ಆ ನೀರನ್ನು ಹಾಕಿದರೆ ಗಿಡ ಕಳೆಗಟ್ಟುತ್ತದೆ