ಉಪ್ಪಿಟ್ಟು ಉದುರಾಗಬೇಕು ಎಂದರೆ ಈ ಟಿಪ್ಸ್ ಗಳನ್ನು ಪಾಲಿಸಿ

ಉಪ್ಪಿಟ್ಟು ಸರಿಯಾದ ಕ್ರಮದಲ್ಲಿ ಮಾಡದೇ ಇದ್ದರೆ ಅದು ಕಾಂಕ್ರೀಟ್ ಆಗಬಹುದು. ಉಪ್ಪಿಟ್ಟು ಮಾಡುವಾಗ ಅದು ಉದುರು ಉದುರಾಗಿ ಬರಬೇಕೆಂದರೆ ಕೆಲವೊಂದು ಟಿಪ್ಸ್ ಗಳನ್ನು ಪಾಲಿಸಬೇಕು. ಅವುಗಳು ಯಾವುವು ನೋಡಿ.

Photo Credit: Instagram

ಉಪ್ಪಿಟ್ಟು ಮಾಡುವಾಗ ರವೆಯನ್ನು ಮೊದಲು ಕೊಂಚ ಬಣ್ಣ ಮಾಸುವವರೆಗೆ ಹುರಿಯಬೇಕು

ರವೆಯನ್ನು ತುಪ್ಪದಲ್ಲಿ ಹುರಿದರೆ ಘಮ ಮಾತ್ರವಲ್ಲ, ಉದುರಾಗಿಯೂ ಬರುತ್ತದೆ

ತುಪ್ಪ ಇಲ್ಲದೇ ಇದ್ದರೆ ಎಣ್ಣೆ ಹಾಕಿಯೂ ರವೆಯನ್ನು ಚೆನ್ನಾಗಿ ಹುರಿದುಕೊಳ್ಳಬಹುದು

ಹುರಿದುಕೊಂಡ ರವೆಯನ್ನು ಒಗ್ಗರಣೆ ಜೊತೆಗೆ ಮತ್ತೊಂದು ರೌಂಡ್ ಬಿಸಿ ಮಾಡಿದರೆ ಉದುರಾಗುತ್ತದೆ

ರವೆಯನ್ನು ಒಗ್ಗರಣೆಯಲ್ಲಿ ಹುರಿದು ಸ್ವಲ್ಪ ಸ್ವಲ್ಪವೇ ಬಿಸಿ ನೀರು ಹಾಕಿ ಬೇಯಿಸಬೇಕು

ತಣ್ಣೀರಿಗಿಂತ ಬಿಸಿ ನೀರಿನಲ್ಲಿ ಫ್ರೈ ಮಾಡಿದರೆ ಉಪ್ಪಿಟ್ಟು ಚೆನ್ನಾಗಿ ಬರುತ್ತದೆ

ಮುಖ್ಯವಾಗಿ ರವೆಗೆ ಅಳತೆ ಮೀರಿ ನೀರು ಹಾಕಿದರೆ ಉಪ್ಪಿಟ್ಟು ಕಾಂಕ್ರೀಟ್ ಆದೀತು