ಕರಿಬೇವು ಮಾರುಕಟ್ಟೆಯಿಂದ ಮನೆಗೆ ತಂದರೆ ಎರಡರಿಂದ ಮೂರು ದಿನದಲ್ಲಿ ಬಾಡಿ ಅಥವಾ ಕೊಳೆತು ಹೋಗುತ್ತದೆ. ಇದನ್ನು ತಪ್ಪಿಸಲು ಮತ್ತು ಕರಿಬೇವನ್ನು ತುಂಬಾ ಸಮಯದವರೆಗೆ ಹಾಳಾಗದಂತೆ ಇಡಬೇಕೆಂದರೆ ಹೀಗೆ ಮಾಡಿ.
Photo Credit: AI image
ಕರಿಬೇವನ್ನು ಮಾರುಕಟ್ಟೆಯಿಂದ ತಕ್ಷಣ ಚೆನ್ನಾಗಿ ತೊಳೆದು ಬಿಡಿ ಬಿಡಿಯಾಗಿ ನೀರು ಆರಲು ಬಿಡಿ
ನೀರು ಸಂಪೂರ್ಣವಾಗಿ ಆರಿದ ಬಳಿಕ ಕರಿಬೇವನ್ನು ಎಸಳುಗಳನ್ನಾಗಿ ಮಾಡಿಟ್ಟುಕೊಳ್ಳಿ
ಇದನ್ನು ಒಂದು ಗಾಳಿಯಾಡದ ಒಣಗಿದ ಪಾತ್ರೆಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿಟ್ಟುಕೊಳ್ಳಿ
ಹೀಗೆ ಮಾಡುವುದರಿಂದ 10 ರಿಂದ 15 ದಿನದವರೆಗೆ ಕರಿಬೇವು ಹಾಳಾಗುವುದಿಲ್ಲ
ಫ್ರಿಡ್ಜ್ ಇಲ್ಲದೇ ಇದ್ದಲ್ಲಿ ಕರಿಬೇವಿನ ಎಲೆಯನ್ನು ಒಂದು ಪೇಪರ್ ನಲ್ಲಿ ಸುತ್ತಿಟ್ಟುಕೊಳ್ಳಿ
ಕರಿಬೇವಿನ ಎಲೆಯನ್ನು ಒಂದು ಒದ್ದೆ ಬಟ್ಟೆಯಲ್ಲಿ ಸುತ್ತಿಟ್ಟುಕೊಂಡರೂ ಬೇಗ ಹಾಳಾಗಲ್ಲ
ಈ ಪೇಪರ್ ಅಥವಾ ಅವೆಲ್ ನ್ನು ಪ್ರತಿನಿತ್ಯ ಬದಲಾಯಿಸುತ್ತಿದ್ದರೆ ಸಾಕು