ಬೆಂಡೆಕಾಯಿ ಲೋಳೆ ಹೋಗಲಾಡಿಸಲು ಟಿಪ್ಸ್

ಬೆಂಡೆಕಾಯಿ ಪಲ್ಯ ಅಥವಾ ಇನ್ನಿತರ ಯಾವುದೇ ಖಾದ್ಯ ಮಾಡುವಾಗ ಅದರಲ್ಲಿರುವ ಲೋಳೆ ಅಂಶ ಬಾರದಂತೆ ನೋಡಿಕೊಳ್ಳುವುದೇ ಎಲ್ಲರಿಗೂ ದೊಡ್ಡ ತಲೆನೋವು. ಬೆಂಡೆಕಾಯಿಯಲ್ಲಿ ಲೋಳೆ ಅಂಶ ಬಾರದಂತೆ ನೋಡಲು ಈ ಟಿಪ್ಸ್ ಪಾಲಿಸಿ.

Photo Credit: Social Media

ಬೆಂಡೆಕಾಯಿಯನ್ನು ಉಪಯೋಗಿಸುವ ಕೆಲವು ಸಮಯ ಮೊದಲೇ ತೊಳೆದು ನೀರು ಆರಿದ ಮೇಲೆ ಉಪಯೋಗಿಸಿ

ಬೆಂಡೆಕಾಯಿಯನ್ನು ಬೇಯಿಸುವ ಮೊದಲು ಸ್ವಲ್ಪ ಎಣ್ಣೆಯಲ್ಲಿ ಫ್ರೈ ಮಾಡಿಕೊಂಡರೆ ಉತ್ತಮ

ಬೆಂಡೆಕಾಯಿ ಬೇಯಿಸುವಾಗ ಅದಕ್ಕೆ ಕೊಂಚ ಉಪ್ಪು ಸೇರಿಸಿದರೆ ಲೋಳೆ ಅಂಶ ಬೇಗನೇ ಹೋಗುತ್ತದೆ

ಬೆಂಡೆಕಾಯಿ ಫ್ರೈ ಮಾಡುವಾಗ ಕೊಂಚ ಕಡಲೆ ಹಿಟ್ಟನ್ನು ಸೇರಿಸಿದರೆ ಲೋಳೆ ಅಂಶ ಹೋಗುತ್ತದೆ

ಬೆಂಡೆಕಾಯಿ ಬೇಯಿಸುವ ಬಾಣಲೆಗೆ ಕೊಂಚ ಮೊಸರು ಹಾಕಿ ಫ್ರೈ ಮಾಡಿದರೆ ಲೋಳೆಯಾಗಲ್ಲ

ಬೆಂಡೆಕಾಯಿಯನ್ನು ಕತ್ತರಿಸಿ ಸ್ವಲ್ಪ ಹುಳಿ ನೀರಿನಲ್ಲಿ ಬೆರೆಸಿ ಬಳಿಕ ಬೇಯಿಸಿದರೆ ಲೋಳೆ ಅಂಶ ಕಡಿಮೆಯಾಗುವುದು

ಬಲಿತ ಬೆಂಡೆಕಾಯಿ ಬದಲು ಆದಷ್ಟು ಎಳೆಯ ಬೆಂಡೆಕಾಯಿಯನ್ನು ಬಳಸಿದರೆ ಲೋಳೆ ಕಡಿಮೆಯಿರುತ್ತದೆ