ಸಿಲ್ಕ್ ಸೀರೆಯಿಂದ ಎಣ್ಣೆ ಕಲೆ ತೆಗೆಯಲು ಸುಲಭ ಉಪಾಯ

ಸಿಲ್ಕ್ ಸೀರೆಗಳನ್ನು ನೀರಿನಲ್ಲಿ ಅದ್ದಿ ಒಗೆಯಲು ಸಾಧ್ಯವಿಲ್ಲ. ಆದರೆ ಇದಕ್ಕೆ ಎಣ್ಣೆ ಅಥವಾ ಇನ್ನೇನೋ ಕಲೆಯಾದಾಗ ಅದನ್ನು ಡ್ರೈ ಕ್ಲೀನಿಂಗ್ ಗೆ ಕೊಡದೇ ಮನೆಯಲ್ಲಿಯೇ ಸುಲಭವಾಗಿ ಕ್ಲೀನ್ ಮಾಡಲು ಏನು ಮಾಡಬೇಕು? ಇಲ್ಲಿದೆ ಉಪಾಯ.

Photo Credit: WD, Instagram

ಡ್ರೈ ಕ್ಲೀನ್ ಗೆ ಕೊಡದೇ ಮನೆಯಲ್ಲಿಯೇ ಸಿಗುವ ವಸ್ತು ಬಳಸಿ ಸಿಲ್ಕ್ ಸೀರೆ ಕಲೆ ತೆಗೆಯಬಹುದು

ಮೊದಲಿಗೆ ಕಲೆಯಾದ ಭಾಗದ ಕೆಳಗೆ ಶುದ್ಧ ಬಟ್ಟೆ ಹಾಕಿ ಹರವಿಡಿ

ಈಗ ಒಂದು ಬೌಲ್ ನಲ್ಲಿ ನೀರು ಮತ್ತು ಸ್ನಾನ ಮಾಡುವ ಸೋಪ್ ತೆಗೆದುಕೊಳ್ಳಿ

ಸೋಪ್ ನ್ನು ನೀರಿನಲ್ಲಿ ಅದ್ದಿ ಕಲೆಯಾದ ಅಷ್ಟು ಜಾಗವನ್ನು ಮಾತ್ರ ಸೋಪ್ ನಿಂದ ಉಜ್ಜಿ

ಚೆನ್ನಾಗಿ ಉಜ್ಜಿದ ಬಳಿಕ ಕೈಯಿಂದಲೇ ಇತರೆ ಭಾಗಕ್ಕೆ ಹರಡದಂತೆ ಶುಚಿಗೊಳಿಸಿ

ಈಗ ಇದನ್ನು ಶುದ್ಧ ಬಟ್ಟೆಯಿಂದ ಒರೆಸಿ ಗಾಳಿಯಲ್ಲಿ ಹರಡಿ ಒಣಗಲು ಬಿಡಿ

ವಿನೇಗರ್ ಅಥವಾ ನಿಂಬೆರಸ ಬೆರೆಸಿದ ನೀರಿಗೆ ಹತ್ತಿಯನ್ನು ಅದ್ದಿ ಒರೆಸಿದರೂ ಕಲೆ ಹೋಗುತ್ತದೆ