ಹೆಲ್ಮೆಟ್ ತೊಳೆಯುವುದು ಹೇಗೆ

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು. ಆದರೆ ಪ್ರತಿನಿತ್ಯ ಬಳಸುವ ಹೆಲ್ಮೆಟ್ ಸರಿಯಾಗಿ ತೊಳೆಯದೇ ಇದ್ದರೆ ಅದರಿಂದಲೇ ರೋಗಗಳು ಬರಬಹುದು.

Photo Credit: Instagram

ಹೆಲ್ಮೆಟ್ ನಲ್ಲಿ ಬೆವರು, ಧೂಳು ಸೇರಿಕೊಂಡು ರೋಗಾಣುಗಳಿಗೆ ದಾರಿಯಾಗಬಹುದು

ಮೊದಲು ಹದ ಬಿಸಿ ನೀರಿಗೆ ಸ್ವಲ್ಪ ಬೇಬಿ ಶ್ಯಾಂಪೂ ಅಥವಾ ಸೋಪ್ ಪೌಡರ್ ಹಾಕಿ

ಈಗ ಹೆಲ್ಮೆಟ್ ನ ಒಳಭಾಗದಲ್ಲಿ ಪದರಗಳೇನಾದರೂ ಇದ್ದರೆ ತೆಗೆದಿಡಿ

ಬಳಿಕ ಹೆಲ್ಮೆಟ್ ನ್ನು ಮಾತ್ರ ಹದ ಬಿಸಿ ಸೋಪ್ ನೀರಿನಲ್ಲಿ ನೆನೆಸಿಡಿ

ಪದರಗಳೇನಾದರೂ ಇದ್ದರೆ ಕೈಯಿಂದಲೇ ತೊಳೆದುಕೊಳ್ಳಬಹುದು

10 ನಿಮಿಷಗಳಷ್ಟು ಹೆಲ್ಮೆಟ್ ಮುಳುಗಿಸಿಟ್ಟು ಬಳಿಕ ಸ್ಪಾಂಜ್ ನಿಂದ ತೊಳೆಯಿರಿ

ಇದನ್ನು ಬಿಸಿಲಿಗೆ ಚೆನ್ನಾಗಿ ಒಣಗಿಸಿ ತೇವಾಂಶ ಹೋದ ಬಳಿಕವೇ ಉಪಯೋಗಿಸಿ