ರಕ್ತಹೀನತೆ ಸಮಸ್ಯೆ ನಿವಾರಣೆಗೆ ಮನೆಮದ್ದುಗಳು

ದೇಹದಲ್ಲಿ ರಕ್ತಹೀನತೆ ಇದ್ದರೆ ಆಗ ಹಲವಾರು ಸಮಸ್ಯೆಗಳು ಕಾಡುವುದು. ರಕ್ತವು ಸಮತೋಲನದಲ್ಲಿ ಇದ್ದರೆ, ಪ್ರತಿರೋಧಕ ಶಕ್ತಿಯು ಸರಿಯಾಗಿ ಕೆಲಸ ಮಾಡುವುದು. ರಕ್ತಹೀನತೆ ಸಮಸ್ಯೆ ನಿವಾರಣೆ ಮಾಡಲು ಹಲವಾರು ರೀತಿಯ ಔಷಧಿ, ಮಾತ್ರೆಗಳು ಲಭ್ಯವಿದ್ದರೂ ಕೆಲವೊಂದು ಮನೆಮದ್ದುಗಳು ಇದನ್ನು ನಿವಾರಣೆ ಮಾಡುವುದು.

photo credit social media

ಭಾರತೀಯ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆಯು ಹೆಚ್ಚಾಗಿರುವುದು ಎಂದು ಅಧ್ಯಯನಗಳು ಹೇಳಿವೆ. ಮಹಿಳೆಯರು ಹಾಗೂ ಮಕ್ಕಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುವುದು.

ಕಬ್ಬಿಣಾಂಶದ ಸಪ್ಲಿಮೆಂಟ್ ನ್ನು ಸೇವನೆ ಮಾಡಿದರೆ, ಆಗ ರಕ್ತಹೀನತೆ ಸಮಸ್ಯೆ ನಿವಾರಣೆ ಮಾಡಲು ಸಹಕಾರಿ ಆಗಿರುವುದು. ಆದರೆ ನೈಸರ್ಗಿಕವಾಗಿ ಇದನ್ನು ನಿವಾರಿಸಲು ಕೆಲವು ಮನೆಮದ್ದುಗಳು ಸಹಕಾರಿ. ಅದು ಹೇಗೆ ಎಂದು ತಿಳಿಯಿರಿ.

ಹಸಿರೆಲೆ ತರಕಾರಿಗಳಾಗಿರುವಂತಹ ಬಸಳೆ, ಪಾಲಕ, ಮೆಂತ್ಯೆ, ಕೊತ್ತಂಬರಿ ಇತ್ಯಾದಿಗಳು ಕಬ್ಬಿಣಾಂಶವನ್ನು ದೇಹಕ್ಕೆ ಒದಗಿಸುವ ಪರಿಣಾಮವಾಗಿ ರಕ್ತವು ಹೆಚ್ಚಾಗುವುದು.

ದಾಳಿಂಬೆಯನ್ನು ಕಬ್ಬಿನಾಂಶವು ಅತ್ಯಧಿಕವಾಗಿದೆ ಮಾತ್ರವಲ್ಲದೆ, ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಕೂಡ ಇದೆ. ಇದರಲ್ಲಿ ಇರುವಂತಹ ವಿಟಮಿನ್ ಸಿ ಕಬ್ಬಿನಾಂಶವನ್ನು ಹೀರಿಕೊಳ್ಳಲು ನೆರವಾಗುವುದು ಮತ್ತು ರಕ್ತಹೀನತೆಗೆ ಇದು ನೈಸರ್ಗಿಕ ಮನೆಮದ್ದು.

ಖರ್ಜೂರದಲ್ಲಿ ಉತ್ತಮ ಪ್ರಮಾಣದ ಆಹಾರದ ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್ ಇದೆ. ಇದರಲ್ಲಿ ವಿಟಮಿನ್ ಬಿ ಸಂಕೀರ್ಣ, ವಿಟಮಿನ್ ಸಿ ಮತ್ತು ಅತ್ಯಧಿಕ ಪ್ರಮಾಣದ ಕಬ್ಬಿನಾಂಶವಿದೆ.

ಬೆಲ್ಲವನ್ನು ಟೀ ಅಥವಾ ಕಾಫಿಗೆ ಹಾಕಿ, ಉಪಾಹಾರದ ವೇಳೆ ಕೂಡ ಇದನ್ನು ಬಳಸಬಹುದು, ರಸಂ, ಸಾಂಬಾರು ಅಥವಾ ಬೇರೆ ಸಿಹಿ ಖಾದ್ಯಗಳಿಗೆ ಇದನ್ನು ಬಳಸಬಹುದು. ಇದನ್ನು ಹೆಚ್ಚಿನ ಕಬ್ಬಿಣಾಂಶವಿದ್ದು, ಸಕ್ಕರೆಗೆ ಪರ್ಯಾಯವಾಗಿ ಬಳಸಿ.

ಆಯುರ್ವೇದದಲ್ಲಿ ರಕ್ತಹೀನತೆ ಸಮಸ್ಯೆ ನಿವಾರಣೆ ಮಾಡಲು ಪುನರ್ನವ ಬಳಕೆ ಮಾಡಲು ಸೂಚಿಸಲಾಗುತ್ತದೆ. ನಿಯಮಿತವಾಗಿ 10 ಮಿ.ಲೀ.ನಷ್ಟು ಇದರ ಜ್ಯೂಸ್ ಸೇವನೆ ಮಾಡಿದರೆ ಅದು ರಕ್ತಹೀನತೆ ಸಮಸ್ಯೆಯನ್ನು ನಿವಾರಣೆ ಮಾಡುವುದು ಎಂದು ಹೇಳಲಾಗಿದೆ.