ಚರ್ಮದ ಕಾಂತಿಯನ್ನು ಹೆಚ್ಚಿಸಲು ಪುದೀನಾ ಬಳಸಿ ನೋಡಿ

ಪುದೀನಾ ಎಲೆಗಳನ್ನು ಸದ್ಗುಣ ಗಣಿ ಎನ್ನಲಾಗುತ್ತದೆ. ಈಎಲೆಗಳನ್ನು ನಿಮ್ಮ ದಿನನಿತ್ಯದ ಯಾವುದಾದರೊಂದು ಆಹಾರದಲ್ಲಿ ಬಳಸುತ್ತಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಕಾಣಬಹುದು. ಇನ್ನು ಈ ಸಸಿ ಔಷಧಿ ಗುಣಗಳನ್ನು ಹೊಂದಿದ್ದು, ಅನೇಕ ರೀತಿಯ ಬ್ಯಾಕ್ಟೀರಿಯಾ ಸಮಸ್ಯೆಗಳಿಗೆ ಮನೆ ಮದ್ದಾಗಿಯೂ ಇದನ್ನು ಬಳಸಬಹುದು.

photo credit social media

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಪುದೀನಾ ರಸವನ್ನು ಕುಡಿಯುವುದು ಉತ್ತಮ. ಇದರಿಂದ ಆಯಾಸ ನಿವಾರಣೆಯಾಗುವುದಲ್ಲದೆ, ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ.

ಕಾಲರಾ ರೋಗ ಕಾಣಿಸಿಕೊಂಡಿದ್ದರೆ ಪುದೀನಾ, ಈರುಳ್ಳಿ ರಸ ಮತ್ತು ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕುಡಿಯುವುದು ಪ್ರಯೋಜನಕಾರಿ.

ಹೊಟ್ಟೆ ನೋವಿನ ಸಂದರ್ಭದಲ್ಲಿ ಪುದೀನಾ, ಜೀರಿಗೆ ಮತ್ತು ಕರಿಮೆಣಸಿನ ಮಿಶ್ರಣ ತಿನ್ನುವುದು ಅಥವಾ ಕುಡಿದರೆ ಪರಿಹಾರ ಕಾಣಬಹುದು.

ಸೌತೆಕಾಯಿಯಂತೆ, ಪುದೀನಾವನ್ನು ಚರ್ಮವನ್ನು ಕಾಂತಿಯನ್ನು ಹೆಚ್ಚಿಸಲು ಸಹ ಬಳಸಲಾಗುತ್ತದೆ.

ಪುದೀನಾ ಎಲೆಗಳ ರಸವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ತಾಜಾತನ ಮತ್ತು ತೇವಾಂಶ ಸಿಗುತ್ತದೆ. ಅಲ್ಲದೆ, ಪುದೀನಾ ಎಲೆಗಳ ರಸವನ್ನು ಮೊಸರು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ತ್ವಚ್ಛೆಯ ಕ್ರೀಮ್​ ಆಗಿ ಬಳಸಬಹುದು.

ಸುಕ್ಕುಗಟ್ಟುವಿಕೆಯನ್ನು ತಡೆಯುವಲ್ಲಿಯು ಸಹ ಪುದೀನಾ ಪ್ರಯೋಜನಕಾರಿ. ಪುದೀನಾ ಎಲೆಗಳ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚುವ ಮೂಲಕ ಚರ್ಮದ ಯೌವ್ವನವನ್ನು ಕಾಪಾಡಿಕೊಳ್ಳಬಹುದು.

ಆಹಾರದಲ್ಲಿ ಪುದೀನಾವನ್ನು ಬಳಸುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.