ತಲೆಹೊಟ್ಟಿನ ಸಮಸ್ಯೆಗೆ ಅನೇಕ ಮನೆ ಮದ್ದು ಮಾಡಿ ನೀವು ಬೇಸತ್ತಿರಬಹುದು. ಹಾಗಿದ್ದರೆ ಅರಸಿನ ಬಳಸಿ ಮಾಡುವ ಈ ಒಂದು ಮನೆ ಮದ್ದು ಮಾಡುವುದರಿಂದ ತಲೆಹೊಟ್ಟು ನಿವಾರಣೆಗೆ ಪರಿಹಾರ ಸಿಗಬಹುದು. ಮಾಡುವುದು ಹೇಗೆ ನೋಡಿ.
credit: social media
ಅರಸಿನದಲ್ಲಿ ಉರಿಯೂತ ನಿವಾರಕ ಗುಣ ಸಾಕಷ್ಟಿದ್ದು ಕೂದಲಿನ ಸಂರಕ್ಷಣೆಗೆ ಉತ್ತಮವಾಗಿದೆ.
ಕೂದಲು ಸಂರಕ್ಷಣೆ ಜೊತೆಗೆ ಮೊಡವೆ ಸಮಸ್ಯೆಗೂ ಅರಸಿನದಲ್ಲಿ ಪರಿಹಾರ ಸಿಗುತ್ತದೆ
ಅರಸಿನದಿಂದ ಕೂದಲು ಉದುರುವಿಕೆ, ತಲೆಹೊಟ್ಟು, ತುರಿಕೆ ಸಮಸ್ಯೆಗಳಿಗೆ ಪರಿಹಾರವಿದೆ
ಕಾಲು ಕಪ್ ತೆಂಗಿನ ಎಣ್ಣೆಗೆ ಅರಸಿನವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ
ಅರ್ಧಗಂಟೆ ಬಿಟ್ಟು ಶ್ಯಾಂಪೂ ಬಳಸಿ ಕೂದಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ
ಅರ್ಧ ಕಪ್ ಹುಳಿ ಮೊಸರು, ಆಲಿವ್ ಎಣ್ಣೆ ಮತ್ತು ಅರಸಿನವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ
ಈ ಎರಡು ಹೇರ್ ಮಾಸ್ಕ್ ಗಳು ಕೂದಲುಗಳನ್ನು ಸಂರಕ್ಷಿಸಿ, ಸದೃಢವಾಗಿಸುತ್ತದೆ