ಕಹಿಬೇವಿನಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿವೆ. ಚರ್ಮದ ರೋಗಗಳಿಗಂತೂ ಕಹಿ ಬೇವು ಅತ್ಯುತ್ತಮ ಔಷಧಿಯಾಗಿದೆ. ಹೀಗಾಗಿ ಸ್ನಾನ ಮಾಡಲು ಬಳಸುವ ನೀರಿಗೆ ಸ್ವಲ್ಪ ಕಹಿಬೇವಿನ ಎಲೆಗಳನ್ನು ಹಾಕಿ ಸ್ನಾನ ಮಾಡಿದರೆ ಏನೆಲ್ಲಾ ಉಪಯೋಗವಿದೆ ನೋಡಿ.
Photo Credit: Social Media
ಸ್ನಾನ ಮಾಡುವ ನೀರಿಗೆ ಸ್ವಲ್ಪ ಕಹಿ ಬೇವಿನ ಎಲೆಗಳನ್ನು ಹಾಕಿದರೆ ಸಾಕಷ್ಟು ಪ್ರಯೋಜನಗಳಿವೆ
ಕಹಿ ಬೇವು ಚರ್ಮಕ್ಕೆ ಅತ್ಯುತ್ತಮವಾಗಿದ್ದು ಇದನ್ನು ಬಳಸಿ ಸ್ನಾನ ಮಾಡುವುದರಿಂದ ಚರ್ಮ ರೋಗ ಬರದು
ಸ್ನಾನದ ನೀರಿಗೆ ಕಹಿ ಬೇವನ್ನು ಹಾಕಿ ಸ್ನಾನ ಮಾಡಿದರೆ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ
ಸ್ನಾನದ ನೀರಿಗೆ ಕಹಿ ಬೇವಿನ ಸೊಪ್ಪು ಹಾಕುವುದರಿಂದ ಚರ್ಮದಲ್ಲಿಆಗುವ ಕಜ್ಜಿ ನಿವಾರಣೆಯಾಗುತ್ತದೆ
ಸ್ನಾನದ ನೀರಿಗೆ ಕಹಿ ಬೇವಿನ ಎಲೆಗಳನ್ನು ಹಾಕುವುದರಿಂದ ಡಾರ್ಕ್ ಸ್ಪಾಟ್ ಗಳು ನಿವಾರಣೆಯಾಗುತ್ತದೆ
ಸ್ನಾನದ ನೀರಿಗೆ ಕಹಿಬೇವಿನ ಎಲೆ ಬಳಸಿದರೆ ಚರ್ಮದ ಸುಕ್ಕುಗಟ್ಟುವುದನ್ನು ತಡೆಯುತ್ತದೆ
ಚಿಕನ್ ಪಾಕ್ಸ್ ಖಾಯಿಲೆ ಇರುವವರು ಸ್ನಾನದ ನೀರಿಗೆ ಕಹಿ ಬೇವು ಬಳಸುವುದು ಅತ್ಯುತ್ತಮ ಔಷಧಿಯಾಗಿದೆ