ಮೊಟ್ಟೆಯ ಚಿಪ್ಪಿನ ಪುಡಿಯನ್ನು ಈ ರೀತಿ ಬಳಸಬಹುದು

ಮೊಟ್ಟೆಯ ಒಳಭಾಗವನ್ನು ಬಳಸಿದ ಬಳಿಕ ಹೊರಗಿನ ಚಿಪ್ಪಿನ ಭಾಗವನ್ನು ಬಿಸಾಕಿ ಬಿಡುತ್ತೇವೆ. ಆದರೆ ಮೊಟ್ಟೆಯ ಚಿಪ್ಪನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಎಷ್ಟೊಂದು ಉಪಯೋಗವಿದೆ ಎಂದು ನೀವು ತಿಳಿದುಕೊಳ್ಳಲೇಬೇಕು.

Photo Credit: Instagram

ಮೊಟ್ಟೆಯ ಚಿಪ್ಪನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು

ಗಾಜಿನ ಡೈನಿಂಗ್ ಟೇಬಲ್ ಕೊಳೆಯಾಗಿದ್ದ ಮೊಟ್ಟೆ ಚಿಪ್ಪಿನ ಪುಡಿ ಹಾಕಿ ಕ್ಲೀನ್ ಮಾಡಬಹುದು

ಕಿಟಿಕಿಯ ಗಾಜುಗಳು ಕೊಳೆಯಾಗಿದ್ದರೆ ಮೊಟ್ಟೆ ಚಿಪ್ಪಿನ ಪುಡಿಯಿಂದ ಕ್ಲೀನ್ ಮಾಡಬಹುದು

ಕಾರಿನ ಗಾಜನ್ನೂ ಮೊಟ್ಟೆಯ ಚಿಪ್ಪಿನ ಪೌಡರ್ ಬಳಸಿ ಕ್ಲೀನ್ ಮಾಡಬಹುದು

ನಿಮ್ಮ ನಾಯಿ ಕ್ಯಾಲ್ಶಿಯಂ ಕೊರತೆಯಿಂದ ಬಳಲುತ್ತಿದ್ದರೆ ಈ ಪೌಡರ್ ನ್ನು ಸೇವಿಸಲು ಕೊಡಿ

ಗಿಡಗಳು ಬಾಡಿಕೊಂಡಿದ್ದರೆ ಮೊಟ್ಟೆ ಚಿಪ್ಪಿನ ಪೌಡರ್ ಹಾಕುವುದರಿಂದ ಸೊಂಪಾಗಿ ಬೆಳೆಯುತ್ತವೆ

ಮೊಟ್ಟೆಯ ಚಿಪ್ಪನ್ನು ಪೌಡರ್ ಮಾಡಿ ಫೇಸ್ ಪ್ಯಾಕ್ ಮಾಡಿದರೆ ಮುಖ ಕಾಂತಿಯುತವಾಗುತ್ತದೆ