ನಿಂಬೆ ಹಣ್ಣು ಬಾಡಿದ್ದರೆ ಹೀಗೆ ಮಾಡಿ

ಮನೆಗೆ ತಂದ ನಿಂಬೆ ಹಣ್ಣು ಬಾಡಿ ಹೋಗಿದೆಯೇ, ಇದನ್ನು ಇನ್ನೇನು ಮಾಡಲು ಸಾಧ್ಯ ಎಂದು ಕಸದ ಬುಟ್ಟಿ ಸೇರಿಸಬೇಡಿ. ಯಾಕೆಂದರೆ ಬಾಡಿದ ನಿಂಬೆ ಹಣ್ಣೂ ಉಪಯೋಗಕ್ಕೆ ಬರುವುದು.

Photo Credit: Instagram

ನಿಂಬೆ ಹಣ್ಣು ಫ್ರಿಡ್ಜ್ ನಲ್ಲಿಟ್ಟರೂ ಒಂದು ವಾರಕ್ಕಿಂತ ಹೆಚ್ಚು ಫ್ರೆಶ್ ಆಗಿ ಉಳಿಯುವುದಿಲ್ಲ

ಕೊಂಚ ಹಳದಿ ಬಣ್ಣ ಮಾಸಿದರೂ ಅದರೊಳಗೆ ರಸ ಅದೇ ರೀತಿ ಇರುತ್ತದೆ

ಬಾಡಿದ ನಿಂಬೆ ಹಣ್ಣಿನ ರಸ ಕಹಿ ರುಚಿ ಕೊಡುವುದರಿಂದ ಅಡುಗೆಗೆ ಉಪಯೋಗಿಸಲಾಗದು

ಬಾಡಿದ ನಿಂಬೆ ಹಣ್ಣನ್ನು ಹೋಳು ಮಾಡಿ ನಿಮ್ಮ ಶೂ ಪಾಲಿಶ್ ಮಾಡಬಹುದು

ಬಟ್ಟೆ ಮೇಲೆ ಕಲೆಯಾಗಿದ್ದರೆ ಬಾಡಿದ ನಿಂಬೆ ಹಣ್ಣಿನ ಹೋಳಿನಿಂದ ಉಜ್ಜಿದರೆ ಕಲೆ ಹೋಗುವುದು

ಬಾಡಿದ, ಅಡುಗೆಗೆ ಉಪಯೋಗಿಸಲು ಸಾಧ್ಯವಾಗದ ನಿಂಬೆ ಹಣ್ಣಿನಿಂದ ಜಿಡ್ಡಿನ ಪಾತ್ರೆ ತೊಳೆಯಬಹುದು

ಅಡುಗೆ ಮನೆಯಲ್ಲಿ ಎಣ್ಣೆ ಕಲೆಯಾಗಿದ್ದರೆ, ಸಿಂಕ್ ಗಳನ್ನು ಉಜ್ಜಲು ಬಾಡಿದ ನಿಂಬೆ ಹಣ್ಣನ್ನು ಉಪಯೋಗಿಸಬಹುದು