ಕಿಡ್ನಿ ಸ್ಟೋನ್ ಇರುವವರು ತಿನ್ನಬಾರದ ತರಕಾರಿಗಳು

ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಕೆಲವೊಂದು ತರಕಾರಿಗಳನ್ನು ತಿನ್ನುವುದು ಅವರ ಆರೋಗ್ಯ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸಬಹುದು. ಕಿಡ್ನಿ ಸಮಸ್ಯೆಯಿರುವವರು ತಿನ್ನಬಾರದ ತರಕಾರಿಗಳು ಯಾವುವು ನೋಡಿ.

Photo Credit: Social Media

ಮೂತ್ರದಲ್ಲಿ ಕ್ಯಾಲ್ಶಿಯಂ ಆಕ್ಸಲೇಟ್ ಅಂಶ ಹೆಚ್ಚಾದಾಗ ಕಲ್ಲುಗಳು ರೂಪುಗೊಳ್ಳುತ್ತವೆ

ಪಾಲಕ್ ಸೊಪ್ಪಿನಲ್ಲಿ ಆಕ್ಸಲೇಟ್ ಅಂಶಗಳು ಹೆಚ್ಚಾಗಿದ್ದು, ಇದರಿಂದ ಸಮಸ್ಯೆ ಹೆಚ್ಚಾಗಬಹುದು

ಆಲೂಗಡ್ಡೆಯೂ ಆಕ್ಸಲೇಟ್ ಅಂಶ ಹೆಚ್ಚಾಗಲು ಕಾರಣವಾಗುವುದರಿಂದ ಸೇವಿಸಬೇಡಿ

ಬೀಟ್ರೂಟ್ ರಕ್ತಹೀನತೆ ಸಮಸ್ಯೆಯಿರುವವರಿಗೆ ಒಳ್ಳೆಯದಾದರೂ ಕಿಡ್ನಿ ಸ್ಟೋನ್ ಇರುವವರಿಗೆ ಒಳ್ಳೆಯದಲ್ಲ

ಆಯುರ್ವೇದ ಔಷಧಗಳಲ್ಲಿ ಬಳಕೆಯಾಗುವ ಶತಾವರಿ ಬೇರಿನಲ್ಲಿ ಆಕ್ಸಲೇಟ್ ಅಂಶ ಹೆಚ್ಚಿರುತ್ತದೆ

ಹಸಿರು ತರಕಾರಿಗಳಲ್ಲಿ ಜನಪ್ರಿಯವಾಗಿರುವ ಬೀನ್ಸ್ ನಲ್ಲೂ ಆಕ್ಸಲೇಟ್ ಅಂಶ ಹೆಚ್ಚಿರುತ್ತದೆ

ನೆನಪಿರಲಿ, ಯಾವುದೇ ವೈದ್ಯಕೀಯ ಪ್ರಯೋಗ ಮಾಡುವ ಮೊದಲು ತಜ್ಞರ ಸಲಹೆ ಪಡೆಯಿರಿ