ನಿಮ್ಮ ಟೆರೇಸ್ ನಲ್ಲಿ ಸುಲಭವಾಗಿ ಬೆಳೆಯಬಹುದಾದ ತರಕಾರಿಗಳು

ಕೆಲವರಿಗೆ ಮನೆಯ ತಾರಸಿಯಲ್ಲಿ ಗಾರ್ಡನ್ ಮಾಡುವ ಹುಚ್ಚು. ಆದರೆ ಸುಲಭವಾಗಿ ಎಲ್ಲಾ ತರಕಾರಿಗಳನ್ನು ಪಾಟ್ ನಲ್ಲಿ ಬೆಳೆಸಲು ಸಾಧ್ಯವಿಲ್ಲ. ಹಾಗಿದ್ದರೆ ಸುಲಭವಾಗಿ ಟೆರೇಸ್ ಗಾರ್ಡನ್ ನಲ್ಲಿ ಬೆಳೆಯಬಹುದಾದ ಗಿಡಗಳು ಯಾವುವು ನೋಡಿ.

Photo Credit: Social Media

ಮನೆಗೆ ತಂಡ ಟೊಮೆಟೊ ಕೊಳೆತು ಹೋಗಿದ್ದರೆ ಅದನ್ನು ಪಾಟ್ ನಲ್ಲಿ ಹಾಕಿ ಸುಲಭವಾಗಿ ಟೊಮೆಟೊ ಬೆಳೆಯಬಹುದು

ಟೊಮೆಟೊ ಬೆಳೆಗೆ ಅಡುಗೆ ಮನೆಯಲ್ಲಿ ಮಿಕ್ಕಿದ ಈರುಳ್ಳಿ ಸಿಪ್ಪೆ, ಚಹಾ ಪುಡಿ ಬಳಸಿದರೆ ಸಾಕು.

ತಾರಸಿ ಕೃಷಿಯಲ್ಲಿ ಸುಲಭವಾಗಿ ಕೊತ್ತಂಬರಿ ಸೊಪ್ಪನ್ನು ಗೊಬ್ಬರವಿಲ್ಲದೇ ಕೇವಲ ಮಣ್ಣು ಮಾತ್ರ ಬಳಸಿ ಮಾಡಬಹುದು

ಮೆಂತ್ಯದ ಕಾಳನ್ನು ಪಾಟ್ ನಲ್ಲಿ ಹಾಕಿ ಯಾವುದೇ ರಾಸಾಯನಿಕ ಬಳಸದೇ ಸೊಪ್ಪನ್ನು ಬಳಸಬಹುದು

ಕೆಂಪು ಮೆಣಸಿನಕಾಯಿ ತಂದಿದ್ದರೆ ಅದರ ಬೀಜಗಳನ್ನು ಪಾಟ್ ನಲ್ಲಿ ಹಾಕಿ ಹಸಿಮೆಣಸಿನ ಕಾಯಿ ಮನೆಯಲ್ಲೇ ಪಡೆಯಿರಿ

ಅನೇಕ ಆರೋಗ್ಯ ಮತ್ತು ಸೌಂದರ್ಯ ಪರಿಹಾರಕ್ಕೆ ಉಪಯೋಗವಾಗುವ ಅಲ್ಯುವೀರಾವನ್ನು ಪಾಟ್ ನಲ್ಲಿ ಬೆಳೆಯಬಹುದು

ಬಾಲ್ಕನಿಯ ಕಬ್ಬಿಣದ ಸರಳುಗಳಿಗೆ ಆತುಕೊಳ್ಳುವಂತೆ ಬೆಳೆಯಲು ಜಾಗವಿದ್ದರೆ ಬೀನ್ಸ್ ನ್ನು ಸುಲಭವಾಗಿ ಮಾಡಬಹುದು