ಮಳೆಗಾಲದಲ್ಲಿ ಸೇವಿಸಬಾರದ ತರಕಾರಿಗಳು

ಮಳೆಗಾಲ ಬಂತೆಂದರೆ ಶೀತ, ಸೋಂಕು ರೋಗಗಳು ಸಾಮಾನ್ಯ. ಹೀಗಾಗಿ ಈ ಕಾಲದಲ್ಲಿ ಬೆಚ್ಚಗೆ, ಆರೋಗ್ಯವಾಗಿರುವುದು ಮುಖ್ಯ. ಹೀಗಿದ್ದಾಗ ಮಳೆಗಾಲದಲ್ಲಿ ಕೆಲವೊಂದು ಶೀತ ಪ್ರಕೃತಿಯ, ಬ್ಯಾಕ್ಟೀರಿಯಾ ಬೆಳೆಯಬಲ್ಲ ತರಕಾರಿಗಳನ್ನು ಸೇವಿಸಬಾರದು.

credit: social media

ಕ್ಯಾರೆಟ್, ಮೂಲಂಗಿಯಂತಹ ಬೇರು ತರಕಾರಿಗಳನ್ನು ಮಳೆಗಾಲದಲ್ಲಿ ಸೇವಿಸುವುದು ಉತ್ತಮವಲ್ಲ

ಮೊಳಕೆ ಕಾಳುಗಳಲ್ಲಿ ಮಳೆಗಾಲದ ಶೈತ್ಯ ಹವಾಗುಣದಿಂದಾಗಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ‍್ಯತೆಗಳಿರುತ್ತವೆ

ಸೊಪ್ಪು ತರಕಾರಿಗಳನ್ನು ಮಳೆಗಾಲದಲ್ಲಿ ಸೇವಿಸುವುದರಿಂದ ಶೀತ ಪ್ರಕೃತಿಯವರಿಗೆ ಆರೋಗ್ಯ ಸಮಸ್ಯೆಯಾಗಬಹುದು

ಮಶ್ರೂಮ್ ಗಳಲ್ಲಿ ಮಳೆಗಾಲದ ಹವಾಗುಣದಿಂದ ಬ್ಯಾಕ್ಟೀರಿಯಾ ಬೆಳವಣಿಗೆಯಾಗುವ ಸಾಧ‍್ಯತೆ ಹೆಚ್ಚು

ಬದನೆಕಾಯಿಯಲ್ಲಿರುವ ನೀರಿನಂಶದಿಂದ ಮಳೆಗಾಲದಲ್ಲಿ ಶ್ವಾಸಕೋಶದ ಸೋಂಕು ಬರುವ ಸಾಧ್ಯತೆಯಿದೆ

ಕ್ಯಾಪ್ಸಿಕಂ ಮೆಣಸನ್ನು ಮಳೆಗಾಲದಲ್ಲಿ ಬಳಸುವುದರಿಂದ ವಾಕರಿಕೆ, ಅಜೀರ್ಣದಂತಹ ಸಮಸ್ಯೆಯಾಗಬಹುದು

ಬೂದುಗುಂಬಳಕಾಯಿಯಲ್ಲಿ ನೀರಿನಂಶ ಜಾಸ್ತಿಯಿದ್ದು ಮಳೆಗಾಲದಲ್ಲಿ ಶೀತಪ್ರಕೃತಿಯವರು ಸೇವಿಸಬಾರದು