ಬೆಳವಣಿಗೆಯ ಹಂತದಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಪೋಷಕಾಂಶ ಸಿಕ್ಕರೆ ಮಾತ್ರ ಅವರು ಆರೋಗ್ಯವಂತವಾಗಿ ಬೆಳೆಯಲು ಸಾಧ್ಯ. ಆದರೆ ಕೆಲವು ಮಕ್ಕಳು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಾರೆ. ಮಕ್ಕಳಲ್ಲಿ ಪೋಷಕಾಂಶ ಕೊರತೆಯಾಗುತ್ತಿದೆ ಎಂದು ತಿಳಿಯುವುದು ಹೀಗೆ.
Photo Credit: Social Media
ವಯಸ್ಸಿಗೆ ತಕ್ಕ ದೇಹ ಬೆಳವಣಿಗೆಯಿಲ್ಲದೇ ಇರುವುದು ಪೋಷಕಾಂಶ ಕೊರತೆಯ ಮುಖ್ಯ ಲಕ್ಷಣ
ಪದೇ ಪದೇ ಜ್ವರ ಬರುವುದು, ಅನಾರೋಗ್ಯಕ್ಕೀಡಾಗುವುದು ಪೋಷಕಾಂಶ ಕೊರತೆಯ ಲಕ್ಷಣಗಳು
ಚರ್ಮ, ತುಟಿ, ಉಗುರಿನ ಸುತ್ತ ಬಣ್ಣ ಪೇಲವವಾಗುವುದು ಪೋಷಕಾಂಶ ಕೊರತೆಯ ಕಾರಣದಿಂದ
ಮಕ್ಕಳಲ್ಲಿ ಕೂದಲು ಉದುರುವಿಕೆ, ಉಗುರು ಬಣ್ಣ ಕಳೆದುಕೊಳ್ಳುವುದು ಪೋಷಕಾಂಶ ಕೊರತೆಯಿಂದ
ಪದೇ ಪದೇ ಹಲ್ಲು ಹುಳುಕಾಗುವುದು, ಅವಧಿಪೂರ್ಣವಾಗಿ ಹಲ್ಲು ಉದುರುವುದು ಇದರ ಲಕ್ಷಣ
ಮಕ್ಕಳು ಬೇಗನೇ ಸುಸ್ತಾಗುವುದು, ಕಾಲು, ಕೈಗಳ ಮಾಂಸಖಂಡಗಳ ನೋವಾಗುವುದು ಪೋಷಕಾಂಶ ಕೊರತೆಯಿಂದ
ಬೆಳವಣಿಗೆಯ ಹಂತದಲ್ಲಿರುವ ಮಕ್ಕಳಿಗೆ ಬೇಳೆ, ಕಾಳುಗಳು, ಸೊಪ್ಪು ತರಕಾರಿಗಳನ್ನು ಹೇರಳವಾಗಿ ಕೊಡಿ