ವೆಸ್ಟ್ ನೈಲ್ ಜ್ವರದ ಲಕ್ಷಣಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು
ಮಳೆಗಾಲ ಬರುತ್ತಿದ್ದಂತೇ ಸೊಳ್ಳೆಗಳಿಂದ ಹರಡುವ ಕಾಯಿಲೆಗಳೂ ಹೆಚ್ಚಾಗುತ್ತವೆ. ಇದೀಗ ಕೇರಳ, ತಮಿಳುನಾಡಿನಲ್ಲಿ ಕಂಡುಬಂದಿರುವ ವೆಸ್ಟ್ ನೈಲ್ ಜ್ವರ ಬೆಂಗಳೂರಿಗೂ ಬರುವ ಅಪಾಯವಿದೆ. ಇದರ ಲಕ್ಷಣಗಳು, ಮುನ್ನೆಚ್ಚರಿಕೆಗಳೇನು ನೋಡಿ.
credit: social media
ಕ್ಯೂಲೆಕ್ಸ್ ಸೊಳ್ಳೆಗಳಿಂದ ಬರುವ ತೀವ್ರ ತರದ ಸೋಂಕು ಜ್ವರ ವೆಸ್ಟ್ ನೈಲ್ ಜ್ವರವಾಗಿದೆ
ತೀವ್ರ ಜ್ವರ, ಆಯಾಸ, ವಾಕರಿಕೆ ಈ ವೆಸ್ಟ್ ನೈಲ್ ಜ್ವರದ ಪ್ರಮುಖ ಲಕ್ಷಣಗಳಾಗಿವೆ.
ಇದರ ಜೊತೆಗೆ ಮಾಂಸಖಂಡಗಳು ಬಿಗಿಯಾದಂತಾಗುವುದು, ಕುತ್ತಿಗೆ ಬಿಗಿಯಾಗುವುದು ಕಂಡುಬರಬಹುದು
ಜ್ವರ ತೀವ್ರ ಮಟ್ಟಕ್ಕೇರಿದಾಗ ರೋಗಿ ಪಾರ್ಶ್ವವಾಯು ಪೀಡಿತನಾಗಬಹುದು ಅಥವಾ ಕೋಮಾಗೆ ಜಾರಬಹುದು
ಆದಷ್ಟು ಮನೆ ಸುತ್ತ ಸೊಳ್ಳೆ ಹುಟ್ಟಲು ಕಾರಣವಾಗುವಂತೆ ಕೊಳಚೆ ನೀರು ನೆಲೆ ನಿಲ್ಲದಂತೆ ನೋಡಿಕೊಳ್ಳಿ
ಆದಷ್ಟು ಆಗಾಗ ಬಿಸಿಯಾದ ನೀರು, ದ್ರವಾಹಾರ, ಆರೋಗ್ಯಕರ ಆಹಾರ ಸೇವಿಸುತ್ತಿದ್ದರೆ ಉತ್ತಮ
ನೆನಪಿರಲಿ, ಯಾವುದೇ ಜ್ವರದ ಲಕ್ಷಣ ಕಂಡುಬಂದರೂ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ