ಪುದೀನಾವನ್ನು ಆಹಾರದ ಜೊತೆ ಸೇವಿಸುವುದರ ಲಾಭಗಳೇನು?

ಭಾರತೀಯರ ಕಾಲಮಾನಗಳಲ್ಲಿ ವಸಂತಋತು ಅತ್ಯಂತ ಸುಂದರವಾದ ಕಾಲವಾಗಿದೆ. ಎಷ್ಟು ಸುಂದರವಾಗಿದೆಯೋ ಅಷ್ಟೇ ಆರೋಗ್ಯಕ್ಕೆ ಸಂಬಂಧಿಸಿದ ಅಲರ್ಜಿಯನ್ನು ಸಹ ಇದು ನೀಡುತ್ತದೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಪುದೀನಾವನ್ನು ಸೇರಿಸುವುದರ ಮೂಲಕ ಈ ರೀತಿಯ ಅಲರ್ಜಿಗಳಿಂದ ದೂರವಿರಬಹುದು. ಪುದೀನಾವು ಅನಾದಿಕಾಲದಿಂದಲೂ ಉತ್ತಮವಾದ ಪರಿಹಾರಗಳನ್ನು ನೀಡುತ್ತಾ ಬಂದಿದೆ.

photo credit social media

ವಸಂತ ಕಾಲದಲ್ಲಿ ಈ ರೀತಿಯ ಹಲವಾರು ಅಲರ್ಜಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಋತುವಿನಲ್ಲಾಗುವ ಬದಲಾವಣೆಯಿಂದ ನಿಮಗೆ ನೆಗಡಿ, ಕೆಮ್ಮು, ಜ್ವರ ಇನ್ನು ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸಹ ಅನುಭವಿಸಬಹುದು.

ನಿಮಗೆ ಯಾವುದೇ ರೀತಿಯ ಔಷಧಿಗಳನ್ನು ಪಡೆದುಕೊಳ್ಳಲು ಇಷ್ಟ ಪಡದವರಾಗಿದ್ದಾರೆ ನೀವು ಮನೆ ಮದ್ದುಗಳ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು. ಪುದೀನಾ ಒಂದು ಮೂಲಿಕೆಯಾಗಿದ್ದು ಇದು ವಸಂತ ಋತುವಿನಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.

ಪುದೀನಾ ಎಂದು ಕರೆಯಲ್ಪಡುವ ಇದು ಮಾನವನಿಗೆ ತಿಳಿದಿರುವ ಅತ್ಯಂತ ಹಳೆಯ ಪಾಕಶಾಲೆಯ ಗಿಡಮೂಲಿಕೆಗಳಲ್ಲಿ ಬಂದಾಗಿದೆ ಎಂದರೆ ತಪ್ಪಾಗುವುದಿಲ್ಲ. ಇದು ಗಮನಾರ್ಹ ಔಷಧೀಯ ಗುಣಗಳನ್ನು ಹೊಂದಿರುವುದರಿಂದ, ಇದನ್ನು ಭಾರತೀಯರು ವಿವಿಧ ರೀತಿಯ ಚಟ್ನಿ ತಯಾರಿಸಲು ಬಳಸುತ್ತಾರೆ.

ಪುದೀನಾಾದಲ್ಲಿರುವ ಪಾಲಿಫಿನಾಲ್ ಗಳು ಸಮೃದ್ಧ ಮೂಲವಾಗಿದೆ. ಇದು ಅದರ ರುಚಿ ಮತ್ತು ಗಮನವನ್ನು ಹೆಚ್ಚಿಸುತ್ತದೆ ಮತ್ತು ಇತರ ಎಲೆಗಳಲ್ಲಿರುವ ಅಂಶವೂ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಪುದೀನಾವೂ ಅಜೀರ್ಣವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.ಇದು ಕಾರ್ಮಿನೆಟಿವ್ ಮತ್ತು ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳನ್ನು ಹೊಂದಿದೆ. ಪುದೀನಾವನ್ನು ಜಗಿದು ತಿನ್ನುವುದರಿಂದ ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.ಇದರಲ್ಲಿರುವ ಸಾರಭೂತ ತೈಲವು ಹಲ್ಲಿನ ನೋವಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ.

ಇದರ ಎಲೆಗಳಲ್ಲಿ ವಿಟಮಿನ್ ಎ,ಸಿ ಮತ್ತು ಬಿ- ಕಾಂಪ್ಲೆಕ್ಸ್ ತುಂಬಿದ್ದು ,ಇದು ಚರ್ಮವನ್ನು ರಕ್ಷಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪುದೀನಾದಲ್ಲಿ ಆಂಟಿ ಆಕ್ಸಿಡೆಂಟ್ ಗಳು , ಮೆಂಥಾಲ್, ಫೈಟೋನ್ಯೂಟ್ರಿಯೆಂಟ್ ಗಳು ಇದ್ದು, ಇದು ಉತ್ತಮ ಕಿಣ್ವಗಳನ್ನು ಉತ್ಪಾದಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪುದೀನಾದಲ್ಲಿರುವ ಉತ್ತಮ ಅಂಶವು ಹೊಟ್ಟೆಯ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇರುವಂತೆ ಮಾಡುತ್ತದೆ. ಇದರ ಜೊತೆಗೆ ಹೋಟೆಯಲ್ಲಿನ ಆಮ್ಲಿಯತೆ ಮತ್ತು ವಾಯುವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ.