ಇಂದು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಯೋಗ ಬಹುಮುಖ್ಯ ಪಾತ್ರ ವಹಿಸುತ್ತದೆ. ಗರ್ಭಿಣಿಯರು ಕೂಡಾ ಯೋಗ ಮಾಡಬಹುದಾಗಿದ್ದು ಯಾವೆಲ್ಲಾ ಯೋಗ ಭಂಗಿ ಸೂಕ್ತ ನೋಡಿ.
Photo Credit: Social Media
ಪದ್ಮಾಸನ ಹಾಕಿಕೊಂಡು ಮಾಡುವ ಸುಲಭ ಮತ್ತು ಸರಳವಾದ ಸುಖಾಸನ ಮಾಡಬಹುದು
ಗರ್ಭಿಣಿಯರಿಗೆ ಬೆನ್ನು, ಕುತ್ತಿಗೆಗೆ ಒತ್ತಡ ಬೀಳದಂತೆ ಮಾಡಲು ತ್ರಿಕೋನಾಸನ ಮಾಡಬಹುದು
ಬೆನ್ನುಲುಬು ಗಟ್ಟಿಯಾಗುವುದಕ್ಕೆ ಗರ್ಭಿಣಿಯರು ಬೆಕ್ಕು ಅಥವಾ ಗೋ ಭಂಗಿಯ ಯೋಗಾಸನ ಮಾಡಬಹುದು
ಚೈಲ್ಡ್ ಪೋಸ್ ಅಥವಾ ಬಾಲಾಸನ ಮಾಡುವುದರಿಂದ ನಿಮ್ಮ ದೇಹ ಹೆಚ್ಚು ಫ್ಲೆಕ್ಸಿಬಲ್ ಆಗುತ್ತದೆ
ಕೆಳ ಹೊಟ್ಟೆಯಲ್ಲಿ ಒತ್ತಡ ಕಡಿಮೆ ಮಾಡಲು ಗರ್ಭಿಣಿಯರು ವೃಕ್ಷಾಸನ ಭಂಗಿ ಪ್ರಯತ್ನಿಸಬಹುದು
ಸೊಂಟ, ಬೆನ್ನು ಹೆಚ್ಚು ಸಡಿಲವಾಗಲು ಉಪವಿಷ್ಠಾಸನ ಭಂಗಿಯನ್ನು ಟ್ರೈ ಮಾಡಬಹುದು
ನೆನಪಿರಲಿ, ಯಾವುದೇ ಯೋಗಾಸನ ಭಂಗಿ ಪ್ರಯತ್ನಿಸುವ ಮೊದಲು ಗರ್ಭಿಣಿಯರು ವೈದ್ಯರ ಸಲಹೆ ಪಡೆಯಬೇಕು