ಡೆಂಗ್ಯೂ ಬಂದಾಗ ಯಾವ ಆಹಾರ ಸೇವಿಸಬೇಕು

ಇತ್ತೀಚೆಗೆ ನಗರದಲ್ಲಿ ಡೆಂಗ್ಯೂ ಜ್ವರದ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿದೆ. ಮಳೆ ಬಂದಾಗಿನಿಂದ ಬೆಂಗಳೂರಿನಲ್ಲಿ ಪ್ರತೀ ಗಂಟೆಗೆ ಇಬ್ಬರಿಗೆ ಎಂಬಂತೆ ಡೆಂಗ್ಯೂ ತಗುಲುತ್ತಿದೆ. ಡೆಂಗ್ಯೂ ಜ್ವರ ಬಂದಾಗ ನಾವು ಯಾವ ಆಹಾರ ಅಥವಾ ಹಣ್ಣು ಸೇವಿಸಬೇಕು ಇಲ್ಲಿ ನೋಡಿ.

Photo Credit: Social Media

ಮುಖ್ಯವಾಗಿ ಸೊಳ್ಳೆಗಳಿಂದ ಹರಡುವ ಸೋಂಕಿನಿಂದಾಗಿ ನಮಗೆ ಡೆಂಗ್ಯೂ ಜ್ವರ ಬರುತ್ತದೆ

ಡೆಂಗ್ಯೂ ಜ್ವರ ಬಂದಾಗ ತೀವ್ರ ಸುಸ್ತು, ಮೈ ಕೈ ನೋವು, ತಲೆನೋವು, ವಾಕರಿಕೆ ಲಕ್ಷಣಗಳು ಕಂಡುಬರುತ್ತದೆ

ಈ ಸಂದರ್ಭದಲ್ಲಿ ಸುಸ್ತು ಕಡಿಮೆ ಮಾಡಲು ಸಾಕಷ್ಟು ಎಳೆ ನೀರು ಸೇವನೆ ಮಾಡಿದರೆ ಉತ್ತಮ

ವಿಟಮಿನ್ ಸಿ ಅಂಶ ಹೇರಳವಾಗಿರುವ ಕಿತ್ತಳೆ ಹಣ್ಣನ್ನು ಡೆಂಗ್ಯೂ ಜ್ವರ ಬಂದಾಗ ಸಾಕಷ್ಟು ಸೇವನೆ ಮಾಡಿ

ವಿಟಮಿನ್, ಕಬ್ಬಿಣದಂಶ, ಒಮೆಗಾ 3 ಆಸಿಡ್ ಅಂಶವಿರುವ ಪಾಲಕ್ ಸೊಪ್ಪನ್ನು ಸೇವನೆ ಮಾಡಿ

ರಕ್ತ ಕಣಗಳ ಸಂಖ್ಯೆ ಕುಗ್ಗದಂತೆ ಪಪ್ಪಾಯ ಎಲೆಗಳ ಜ್ಯೂಸ್ ಮಾಡಿ ಸೇವನೆ ಮಾಡುವುದು ಮುಖ್ಯವಾಗಿದೆ

ರಕ್ತ ಕಣಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ದಾಳಿಂಬೆ ಹಣ್ಣನ್ನು ಸಾಕಷ್ಟು ಸೇವನೆ ಮಾಡಿ