ಮಗುವಿಗೆ ಹಲ್ಲು ಹುಟ್ಟುವುದು ನಿಧಾನವಾದರೆ ಏನು ಮಾಡಬೇಕು

ಎಲ್ಲಾ ಮಕ್ಕಳ ಬೆಳವಣಿಗೆ ಹಂತವೂ ಒಂದೇ ರೀತಿ ಇರುವುದಿಲ್ಲ. ಕೆಲವು ಮಕ್ಕಳಿಗೆ ನಿಗದಿತ ಸಮಯಕ್ಕೆ ಹಲ್ಲು ಹುಟ್ಟುವುದಿಲ್ಲ. ಹಲ್ಲು ಹುಟ್ಟುವುದರ ಲಕ್ಷಣಗಳು ಮತ್ತು ಹಲ್ಲು ಹುಟ್ಟುವುದು ನಿಧಾನವಾದರೆ ಏನು ಮಾಡಬೇಕು ನೋಡಿ.

Photo Credit: Instagram

ನಾಲ್ಕು ತಿಂಗಳಿನಿಂದ ಎಂಟು ತಿಂಗಳ ಒಳಗಾಗಿ ಮಗುವಿಗೆ ಹಲ್ಲು ಹುಟ್ಟಲು ಆರಂಭವಾಗುತ್ತದೆ

ಹಲ್ಲು ಬರುವ ಹಂತದಲ್ಲಿ ಮಕ್ಕಳು ಎಲ್ಲಾ ವಸ್ತುಗಳನ್ನು ಕಡಿಯುವ ಲಕ್ಷಣ ತೋರಿಸುತ್ತಾರೆ

ನಿಗದಿತ ವಯಸ್ಸಾದರೂ ಹಲ್ಲು ಬಾರದೇ ಇದ್ದಲ್ಲಿ ವಸಡಿನಲ್ಲಿ ಸಮಸ್ಯೆಯಿರಬಹುದು

ಹಲ್ಲು ಹುಟ್ಟುವ ಲಕ್ಷಣ ಬಂದಾಗ ಮಕ್ಕಳಿಗೆ ಕ್ಯಾರೆಟ್ ನಂತಹ ತರಕಾರಿ ಕಡಿಯಲು ಕೊಡಿ

ಗಟ್ಟಿ ಆರೋಗ್ಯಕರ ವಸ್ತು ಕಡಿದರೆ ವಸಡನ್ನು ಬೇಧಿಸಿ ಹಲ್ಲು ಹುಟ್ಟಲು ಸುಲಭವಾಗುತ್ತದೆ

ಹಲ್ಲು ಮೂಡುವ ಲಕ್ಷಣಗಳು ಇದ್ದ ಜಾಗದಲ್ಲಿ ವಸಡನ್ನು ಮೃದುವಾಗಿ ನಿತ್ಯವೂ ಮಸಾಜ್ ಮಾಡಿ

ಅಗತ್ಯ ಬಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ವಸಡನ್ನು ಬೇಧಿಸಲು ಸಹಾಯ ಪಡೆದುಕೊಳ್ಳಬಹುದು