ಹೊಟ್ಟೆ ತುಂಬಾ ಊಟವಾಡಿದ ಮೇಲೆ ಏನಾದರೂ ಕುಡಿಬೇಕು ಎನಿಸಿದರೆ ಅದು ಜೀರ್ಣಕ್ರಿಯೆ ಸುಗಮಗೊಳಿಸುವಂತಹ ಪಾನೀಯಗಳಾಗಿರಲಿ. ಹಾಗಿದ್ದರೆ ಊಟದ ತಕ್ಷಣ ಜೀರ್ಣಕ್ರಿಯೆ ಸುಗಮಗೊಳಿಸಲು ಯಾವೆಲ್ಲಾ ಪಾನೀಯವನ್ನು ಸೇವಿಸಬಹುದು ನೋಡೋಣ.
credit: social media
ಶುಂಠಿ, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಕಿದ ಮಸಾಲೆ ಮಜ್ಜಿಗೆಯನ್ನು ಸೇವಿಸಿ.
ಶುಂಠಿ ಹಾಕಿ ಮಾಡಿದ ಹದ ಬಿಸಿ ಚಹಾ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಅಲ್ಯುವೀರಾದಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಅಂಶವಿದ್ದು, ಇದರ ಜ್ಯೂಸ್ ಸೇವಿಸಿ.
ದಕ್ಷಿಣ ಭಾರತೀಯ ಶೈಲಿಯ ಊಟದ ಜೊತೆಗೆ ಸಿಗುವ ರಸಂ ಸೇವಿಸಿದರೆ ಉತ್ತಮ.
ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಸರಿಪಡಿಸುವ ಜೀರಿಗೆ ಹಾಕಿದ ನೀರು ಸೇವಿಸಿ.
ಜೀರ್ಣಕ್ರಿಯೆ ಸುಧಾರಿಸುವ ಬ್ಯಾಕ್ಟೀರಿಯಾಗಳಿರುವ ಆಪಲ್ ಸೈಡ್ ವಿನೇಗರ್ ಜ್ಯೂಸ್
ಗಮನಿಸಿ, ಯಾವುದೇ ಪ್ರಯೋಗ ನಡೆಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ.