ಮೂತ್ರ ವಿಸರ್ಜನೆ ವೇಳೆ ಉರಿಯಲು ಕಾರಣಗಳು

ಮೂತ್ರ ವಿಸರ್ಜನೆ ಮಾಡುವಾಗ ಕೆಲವರಿಗೆ ಉರಿ ಅನುಭವವಾಗುತ್ತದೆ. ಆದರೆ ಇದನ್ನು ಕಡೆಗಣಿಸಲು ಸಾಧ್ಯವಿಲ್ಲ. ಯಾಕೆಂದರೆ ಇದರ ಹಿಂದೆ ಅನೇಕ ಕಾರಣಗಳಿರಬಹುದು. ಮೂತ್ರಿಸುವಾಗ ಅಥವಾ ವಿಸರ್ಜಿಸಿದ ನಂತರ ಉರಿಯಲು ಕಾರಣಗಳು ಏನಿರಬಹುದು ನೋಡೋಣ.

credit: social media

ಮೂತ್ರನಾಳದಲ್ಲಿ ಕಲ್ಲು ಉಂಟಾದಾಗ ಮೂತ್ರ ವಿಸರ್ಜನೆ ವೇಳೆ ಉರಿಯಾಗಬಹುದು.

ಲೈಂಗಿಕ, ಗುಪ್ತಾಂಗ ರೋಗಗಳ ಕಾರಣದಿಂದ ಮೂತ್ರಿಸುವಾಗ ಉರಿ ಉಂಟಾಗಬಹುದು.

ಅತಿಯಾಗಿ ಸೈಕ್ಲಿಂಗ್ ಅಥವಾ ಕುದುರೆ ಸವಾರಿ ಮಾಡಿದಾಗ ಈ ರೀತಿ ಆಗಬಹುದು

ಮೂತ್ರನಾಳ ಅಥವಾ ಮೂತ್ರದ ಸೋಂಕು ಇದ್ದಾಗ ಉರಿ ಆಗುವ ಸಾಧ್ಯಬತೆಯಿದೆ.

ಕೆಲವೊಂದು ಔಷಧಿ ಅಥವಾ ಗುಳಿಗೆ ಸೇವನೆಯಿಂದ ಅಡ್ಡ ಪರಿಣಾಮವಾಗಬಹುದು

ಮೂತ್ರನಾಳದಲ್ಲಿ ಗಡ್ಡೆ ಬೆಳವಣಿಗೆಯಾದಾಗ ಉರಿ ಅನುಭವವಾಗಬಹುದು.

ಇಂತಹ ಸಂದರ್ಭದಲ್ಲಿ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.