ಜ್ವರ ಬಂದರೆ ಏನೋ ಮಹಾ ರೋಗ ಬಂದಂತೆ ಟೆನ್ಷನ್ ಆಗುತ್ತೇವೆ. ಆದರೆ ಕೆಲವೊಮ್ಮೆ ಜ್ವರ ಬರುವುದೂ ದೇಹಕ್ಕೆ ಕೆಲವು ರೀತಿಯಲ್ಲಿ ಉಪಯುಕ್ತ. ಜ್ವರ ಯಾವೆಲ್ಲಾ ರೀತಿಯಲ್ಲಿ ನಮ್ಮ ದೇಹಕ್ಕೆ ಒಳ್ಳೆಯದು ಮಾಡುತ್ತದೆ ಎಂದು ನೋಡೋಣ.
Photo Credit: Social Media
ಜ್ವರ ಬರುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಬಿಳಿ ರಕ್ತ ಕಣಗಳ ಸಂಖ್ಯೆ ವೃದ್ಧಿಯಾಗುತ್ತದೆ
ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ದೇಹದಲ್ಲಿ ಹೆಚ್ಚು ಬೆಳವಣಿಗೆಯಾಗದಂತೆ ಜ್ವರ ತಡೆಯುತ್ತದೆ
ದೇಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಆಂಟಿ ಬ್ಯಾಕ್ಟೀರಿಯಲ್ ಅಂಶದ ಬೆಳವಣಿಗೆಗೆ ಸಹಕರಿಸುತ್ತದೆ
ಜ್ವರ ಒಂದು ರೋಗವಲ್ಲ, ದೇಹದಲ್ಲಿರುವ ಯಾವುದೋ ಒಂದು ಅನಾರೋಗ್ಯಕರ ಬೆಳವಣಿಗೆಯನ್ನು ಸೂಚಿಸುವುದಾಗಿದೆ
ಜ್ವರ ಬಂದಾಗ ನಮ್ಮ ಇಡೀ ದೇಹದಲ್ಲಿರುವ ವಿಷಕಾರೀ ಅಂಶಗಳು ಒಮ್ಮೆಗೇ ನಿವಾರಣೆಯಾಗುತ್ತದೆ
ಜ್ವರ ಬಂದಾಗ ತಾಪಮಾನ ಹೆಚ್ಚಿ ದೇಹದಲ್ಲಿ ಅಂಗಾಂಶಗಳ ರಿಪೇರಿ ಕೆಲಸ ನಡೆಯುತ್ತದೆ
ಜ್ವರ ನಮ್ಮ ದೇಹ ಸೇರಿಕೊಂಡಿರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ರೋಗದ ಅಂಶವನ್ನು ಹೊರಹಾಕುತ್ತದೆ