ಮಕ್ಕಳು ಸುಲಭವಾಗಿ ತಿಂಡಿ ತಿನ್ನಲ್ಲ. ಅವರಿಗೆ ರುಚಿಸುವಂತೆ ಡಿಫರೆಂಟ್ ಆಗಿ ತಿಂಡಿ ಮಾಡಿದರೆ ಚಪ್ಪರಿಸಿಕೊಂಡು ತಿನ್ನುತ್ತಾರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚಪ್ಪರಿಸಿಕೊಂಡು ತಿನ್ನಬಹುದಾದ ಆಲೂಗಡ್ಡೆ ತವಾ ಫ್ರೈ ಮಾಡುವ ವಿಧಾನ ಇಲ್ಲಿದೆ.
Photo Credit: Instagram
ಆಲೂಗಡ್ಡೆ, ಕಡಲೆಹಿಟ್ಟು, ಮೊಸರು, ಉಪ್ಪು, ಖಾರದ ಪುಡಿ, ಕೊಂಚ ಅರಿಶಿನ ಪುಡಿ, ಎಣ್ಣೆ, ಈರುಳ್ಳಿ ಬೇಕಾಗುವ ಸಾಮಗ್ರಿ
ಆಲೂಗಡ್ಡೆಯ ಸಿಪ್ಪೆ ತೆಗೆದು ತೆಳುವಾಗಿ ಸ್ಲೈಝ್ ಮಾಡಿಕೊಂಡು ನೀರಿನಲ್ಲಿ ಹಾಕಿ
ಒಂದು ಬೌಲ್ ನಲ್ಲಿ ಕೊಂಚ ಕಡಲೆ ಹಿಟ್ಟಿಗೆ ಕೊಂಚ ಮೊಸರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ
ಗಂಟುಗಳಿಲ್ಲದೇ ಕಲಸಿಕೊಂಡ ನಂತರ ಇದಕ್ಕೆ ಅರಿಶಿನ ಪುಡಿ, ಖಾರದಪುಡಿ, ಉಪ್ಪು ಹಾಕಿ
ಒಂದು ತವಾಗೆ ಚೆನ್ನಾಗಿ ಎಣ್ಣೆ ಹಚ್ಚಿಕೊಂಡು ಅದು ಚೆನ್ನಾಗಿ ಬಿಸಿಯಾಗಲು ಬಿಡಿ
ಈಗ ನೀರಿನಲ್ಲಿ ಹಾಕಿಟ್ಟ ಆಲೂಗಡ್ಡೆಯನ್ನು ಕಲಸಿಟ್ಟ ಕಡಲೆ ಹಿಟ್ಟಿಗೆ ಅದ್ದಿ ತವಾದಲ್ಲಿ ಬೇಯಿಸಿ
ಮಧ್ಯಮ ಉರಿಯಲ್ಲಿ ಎರಡೂ ಬದಿ ಚೆನ್ನಾಗಿ ಬೇಯಿಸಿದ ಬಳಿ ಮೇಲಿನಿಂದ ಹೆಚ್ಚಿದ ಈರುಳ್ಳಿ ಹಾಕಿ ತಿನ್ನಿ