ಮೊಸರನ್ನದ ಜೊತೆಗೆ ಒಂದು ಹೋಳು ನಿಂಬೆ ಹಣ್ಣಿನ ಉಪ್ಪಿನಕಾಯಿ ನೆಚ್ಚಿಕೊಳ್ಳಲು ಸಿಕ್ಕರೆ ಅದರ ರುಚಿಯೇ ಬೇರೆ. ಹಾಗಿದ್ದರೆ ಕಹಿ ಬಾರದಂತೆ ನಿಂಬೆ ಹಣ್ಣಿನ ರುಚಿಯಾದ ಉಪ್ಪಿನಕಾಯಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.
Photo Credit: Instagram
ಮೊದಲಿಗೆ ನಿಂಬೆಹಣ್ಣನ್ನು ನಾಲ್ಕು ತುಂಡಾಗಿ ಕತ್ತರಿಸಿ ಒಂದು ಜರಡಿಯಲ್ಲಿ ಹಾಕಿ
ನೆನಪಿಡಿ, ನಿಂಬೆ ಹಣ್ಣು ಕತ್ತರಿಸುವಾಗ ಅದರಿಂದ ಬೀಜ ತೆಗೆದಿರಿಸಿದರೆ ಕಹಿ ಬಾರದು
ಕತ್ತರಿಸಿದ ಹೋಳಿಗೆ ಉಪ್ಪು ಹಾಕಿ ಒಂದು ವಾರದ ಕಾಲ ಹಾಗೇ ಬಿಡಿ
ಬಳಿಕ ಹೋಳು ಮೆತ್ತಗಾಗಿ ಉಪ್ಪು ಎಲ್ಲವೂ ಕರಗಿದ ಮೇಲೆ ಅದಕ್ಕೆ ಖಾರದ ಪುಡಿ ಹಾಕಿ
ಬಳಿಕ ಅರಿಶಿನ ಪುಡಿ, ಇಂಗು, ಮೆಂತ್ಯ ಪುಡಿ, ಜೀರಿಗೆ ಪುಡಿಯನ್ನೂ ಸೇರಿಸಿ
ಇವಿಷ್ಟೂ ಚೆನ್ನಾಗಿ ಮಿಕ್ಸ್ ಆಗುವಂತೆ ಕೈಯಾಡಿಸಿ ಬೇಕಿದ್ದರೆ ಸ್ವಲ್ಪ ಉಪ್ಪು ನೀರು ಹಾಕಿ
ಬಳಿಕ ಸಾಸಿವೆ, ಕರಿಬೇವು, ಇಂಗು ಹಾಕಿದ ಒಗ್ಗರಣೆ ಕೊಟ್ಟರೆ ನಿಂಬೆ ಉಪ್ಪಿನಕಾಯಿ ರೆಡಿ