ಶ್ರೀಕೃಷ್ಣನ ದ್ವಾರಕೆಯ ರಹಸ್ಯಗಳು ನಿಮಗೆ ತಿಳಿದಿದೆಯಾ

ಭಗವಾನ್ ಶ್ರೀಕೃಷ್ಣನು ಅವತಾರವೆತ್ತಿದ ಯುಗವನ್ನು ದ್ವಾಪರ ಯುಗವೆಂದು ಕರೆಯಲಾಗುತ್ತದೆ. ಕೃಷ್ಣ ಹುಟ್ಟಿದ್ದು ಮಧುರೆಯಲ್ಲಿ, ಬೆಳೆದಿದ್ದು ವೃಂದಾವನದಲ್ಲಿ. ಅವನು ತನ್ನ ಪರಿವಾರದೊಂದಿಗೆ ಅರಸನಾಗಿ ಕಳೆದಿದ್ದು ದ್ವಾರಕಾನಗರಿಯಲ್ಲಿ. ಈ ನಗರದ ರಹಸ್ಯಗಳು ಇಲ್ಲಿವೆ.

Photo Credit: Social Media

ಗುಜರಾತ್ ನ ಸೌರಾಷ್ಟ್ರ ಬಳಿ ದ್ವಾರಕಾ ನಗರ ಅರಬ್ಬಿ ಸಮುದ್ರದಡಿಯಲ್ಲಿ ಮುಳುಗಿ ಹೋಗಿದೆ.

ಆದರೆ ಇಂದಿಗೂ ಇಲ್ಲಿ ಕೃಷ್ಣನ ರಾಜಧಾನಿಯ ಕುರುಹುಗಳು, ಕಟ್ಟಡಗಳು ಇವೆ ಎಂಬುದು ಪತ್ತೆಯಾಗಿದೆ

ಈ ನಗರಿಗೆ ಕೃಷ್ಣನ ಅಣತಿಯಂತೆ ರೂಪ ನೀಡಿದ್ದು ದೇವ ಶಿಲ್ಪಿ ವಿಶ್ವಕರ್ಮ ಎನ್ನಲಾಗಿದೆ.

ಇತಿಹಾಸಕಾರರಿಗೆ ಇಲ್ಲಿ ಸಿಕ್ಕ ಕೆಲವೊಂದು ವಸ್ತುಗಳು 2000 ವರ್ಷಕ್ಕಿಂತಲೂ ಹಳೆಯದು ಎಂದು ತಿಳಿದುಬಂದಿದೆ

ದ್ವಾರಕಾ ನಗರ ಸುಮಾರು 3500 ವರ್ಷಗಳ ಹಿಂದೆಯೇ ನಿರ್ಮಾಣವಾಗಿರಬಹುದು ಎಂದು ಇತಿಹಾಸಕಾರರು ಹೇಳುತ್ತಾರೆ

ಶ್ರೀಕೃಷ್ಣನ ಸಾವಿನ ಬಳಿಕ ಈ ನಗರ ಮುಳುಗಿತು ಎಂದು ಪುರಾಣದಲ್ಲೂ ಹೇಳಲಾಗಿದೆ

ಇಲ್ಲಿನ ದೇವಸ್ಥಾನಗಳನ್ನೂ ಶ್ರೀಕೃಷ್ಣನ ವಂಶದವರೇ ಸ್ಥಾಪಿಸಿದ್ದು ಅವನ ಅವತಾರವನ್ನು ಪುಷ್ಠೀಕರಿಸುತ್ತದೆ