ಇಂದು ಶಿವರಾತ್ರಿ ಹಬ್ಬವಾಗಿದ್ದು ಎಲ್ಲೆಡೆ ಹಿಂದೂ ಆಸ್ತಿಕರು ಮಹಾಶಿವರಾತ್ರಿಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
ಶಿವನನ್ನು ಸಾಮಾನ್ಯವಾಗಿ ಲಿಂಗ ರೂಪದಲ್ಲೇ ಪೂಜೆ ಮಾಡುತ್ತಾರೆ. ಶಿವ ಲಿಂಗವನ್ನು ದೈವಿಕ ಸ್ವರೂಪದ ಶಕ್ತಿ ಎಂದು ಪೂಜಿಸುತ್ತಾರೆ.
ಶಿವರಾತ್ರಿಗೆ ಇಡೀ ರಾತ್ರಿ ಜಾಗರಣೆಯಿದ್ದು, ಶಿವನ ನಾಮ ಸ್ಮರಣೆ ಮಾಡುತ್ತಾ ಅವನ ಕೃಪೆಗೆ ಪಾತ್ರರಾಗುವುದು ಇಂದಿನ ವಿಶೇಷ.