ಹೃದಯಸ್ತಂಬನಕ್ಕೊಳಗಾಗಿದ್ದ ತೆಲುಗು ನಟ ನಂದಮೂರಿ ತಾರಕರತ್ನ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಕೊನೆಯುಸಿರೆಳೆದಿದ್ದಾರೆ.
Photo credit:Twitterಅವರಿಗೆ 39 ವರ್ಷ ವಯಸ್ಸಾಗಿತ್ತು. ಜನವರಿ 27 ರಂದು ಚಿತ್ತೂರು ಬಳಿ ಟಿಡಿಪಿ ಪಾದಯಾತ್ರೆ ವೇಳೆ ಕುಸಿದು ಬಿದ್ದಿದ್ದ ಅವರಿಗೆ ಕಳೆದ 23 ದಿನಗಳಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಖ್ಯಾತ ನಟ ದಿವಂಗತ ಎನ್ ಟಿಆರ್ ಅವರ ಮೊಮ್ಮಗ, ಜ್ಯೂ.ಎನ್ ಟಿಆರ್ ಸಹೋದರನಾಗಿರುವ ತಾರಕ ರತ್ನ ನಿಧನಕ್ಕೆ ತೆಲುಗು, ಕನ್ನಡ ಚಿತ್ರರಂಗ ಸೇರಿದಂತೆ ಅಭಿಮಾನಿಗಳೂ ಕಂಬನಿ ಮಿಡಿದಿದ್ದಾರೆ.
ಖ್ಯಾತ ನಟ ದಿವಂಗತ ಎನ್ ಟಿಆರ್ ಅವರ ಮೊಮ್ಮಗ, ಜ್ಯೂ.ಎನ್ ಟಿಆರ್ ಸಹೋದರನಾಗಿರುವ ತಾರಕ ರತ್ನ ನಿಧನಕ್ಕೆ ತೆಲುಗು, ಕನ್ನಡ ಚಿತ್ರರಂಗ ಸೇರಿದಂತೆ ಅಭಿಮಾನಿಗಳೂ ಕಂಬನಿ ಮಿಡಿದಿದ್ದಾರೆ.