ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಿಟ್ ಮ್ಯಾನ್ ಅವತಾರಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನದಲ್ಲಿ ಶತಕ ಸಿಡಿಸಿದ್ದಾರೆ.
ಕಳೆದ 51 ಇನಿಂಗ್ಸ್ ಗಳಲ್ಲಿ ರೋಹಿತ್ ಶತಕ ಗಳಿಸಿರಲಿಲ್ಲ. ಕೊನೆಗೂ ಈಗ ಶತಕದ ಬರ ನೀಗಿಸಿಕೊಂಡಿದ್ದಾರೆ. ಇದು ಏಕದಿನಗಳಲ್ಲಿ ಅವರ 30 ನೇ ಶತಕವಾಗಿತ್ತು.
ಒಟ್ಟು 85 ಎಸೆತ ಎದುರಿಸಿದ ರೋಹಿತ್ ಶರ್ಮಾ 6 ಸಿಕ್ಸರ್, 9 ಬೌಂಡರಿ ಸಹಿತ 101 ರನ್ ಗಳಿಸಿ ಬೌಲ್ಡ್ ಔಟ್ ಆದರು.