ಐಪಿಎಲ್ ನಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬಂದಿಳಿದಿರುವ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಬೆಳ್ಳಂ ಬೆಳಿಗ್ಗೆಯೇ ಅಭಿಮಾನಿಗಳ ಜೊತೆ ಬೆರೆತಿದ್ದಾರೆ.
Photo credit:Twitterಕೊಹ್ಲಿ ಇಂದು ಬೆಳಿಗ್ಗೆ ಒನ್8 ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ವೇದಿಕೆಯಲ್ಲಿ ನಿಂತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಲ್ಲದೆ, ಸೆಲ್ಫೀ ತೆಗೆದು ಸಂಭ್ರಮಿಸಿದ್ದಾರೆ.
ಇನ್ನು ವೇದಿಕೆಯಲ್ಲಿ ಕರ್ನಾಟಕದ ಕಲೆ ಡೊಳ್ಳು ಕುಣಿತವನ್ನೂ ಪ್ರದರ್ಶಿಸಲಾಯಿತು. ಇದನ್ನು ಕೊಹ್ಲಿ ಕುತೂಹಲದಿಂದ ವೀಕ್ಷಿಸಿದ್ದಾರೆ. ಇನ್ನು, ತಮ್ಮ ನೆಚ್ಚಿನ ಆಟಗಾರನನ್ನು ಹತ್ತಿರದಿಂದ ಕಂಡ ಅಭಿಮಾನಿಗಳ ಹರ್ಷ ಮೇರೆ ಮೀರಿತ್ತು.
ಇನ್ನು ವೇದಿಕೆಯಲ್ಲಿ ಕರ್ನಾಟಕದ ಕಲೆ ಡೊಳ್ಳು ಕುಣಿತವನ್ನೂ ಪ್ರದರ್ಶಿಸಲಾಯಿತು. ಇದನ್ನು ಕೊಹ್ಲಿ ಕುತೂಹಲದಿಂದ ವೀಕ್ಷಿಸಿದ್ದಾರೆ. ಇನ್ನು, ತಮ್ಮ ನೆಚ್ಚಿನ ಆಟಗಾರನನ್ನು ಹತ್ತಿರದಿಂದ ಕಂಡ ಅಭಿಮಾನಿಗಳ ಹರ್ಷ ಮೇರೆ ಮೀರಿತ್ತು.