Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 4 ಆಗಸ್ಟ್ 2019 (07:20 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಗೃಹ ಸಂಬಂಧೀ ಕೆಲಸಗಳಲ್ಲಿ ಅಧಿಕ ಓಡಾಟ ನಡೆಸಬೇಕಾಗುತ್ತದೆ. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸ್ಥಾನ ಮಾನ ಲಭ್ಯವಾಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.
 
ವೃಷಭ: ದಾಯಾದಿಗಳೊಂದಿಗೆ ಕೌಟುಂಬಿಕ ಕಲಹಕ್ಕೆ ಹಿರಿಯರ ಮಧ್ಯಸ್ಥಿಕೆ ವಹಿಸುವುದು ಒಳ್ಳೆಯದು. ದುಡುಕಿನ ವರ್ತನೆಯಿಂದ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಆದಷ್ಟು ಮೌನಕ್ಕೆ ಶರಣಾಗುವುದು ಒಳ್ಳೆಯದು.
 
ಮಿಥುನ: ಆರೋಗ್ಯ ಸಂಬಂಧವಾಗಿ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಸ್ವ ಉದ್ಯೋಗಿಗಳಿಗೆ ಲಾಭವಾಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ವೃತ್ತಿ ಜೀವನದಲ್ಲಿ ಯಾರನ್ನೂ ನಂಬದ ಪರಿಸ್ಥಿತಿ ಎದುರಾಗಲಿದೆ.
 
ಕರ್ಕಟಕ: ನೂತನ ಗೃಹ ನಿರ್ಮಾಣ ಕಾರ್ಯಗಳಿಗೆ ಮುಂದಾಗುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಸಂಗಾತಿಯ ಮನಸ್ಸಿಗೆ ಖುಷಿಯಾಗುವಂತೆ ನಡೆದುಕೊಳ್ಳಬೇಕಾಗುತ್ತದೆ.
 
ಸಿಂಹ: ಅನಿರೀಕ್ಷಿತವಾಗಿ ವಿವಾಹ ಸಂಬಂಧಗಳು ಕೂಡಿಬರಲಿವೆ. ಆರ್ಥಿಕ ಸ್ಥಿತಿಯಲ್ಲಿ ಧನವ್ಯಯವಾಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
 
ಕನ್ಯಾ: ಕೌಟುಂಬಿಕ ಕೆಲಸಗಳಿಗೆ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ಮನೆಗೆ ಹೊಸ ಅತಿಥಿಗಳ ಆಗಮನವಾಗಲಿದೆ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ. ವೃತ್ತಿರಂಗದಲ್ಲಿ ಅಧಿಕ ಕಾರ್ಯದೊತ್ತಡವಿರಲಿದೆ.
 
ತುಲಾ: ಮನೆ, ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸುವಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.  ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕು. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.
 
ವೃಶ್ಚಿಕ: ವೃತ್ತಿರಂಗದಲ್ಲಿ ಬದಲಾವಣೆ ಬಯಸುವಿರಿ. ಹಂತ ಹಂತವಾಗಿ ಅಭಿವೃದ್ಧಿ ಅನುಭವಕ್ಕೆ ಬರುವುದು. ದೇವತಾ ಕಾರ್ಯಕ್ರಮಗಳಿಗೆ ಧನ ವ್ಯಯವಾಗಲಿದೆ. ಮನೆಯಲ್ಲಿ ಸಮಾಧಾನಕರ ವಾತಾವರಣವಿರಲಿದೆ.
 
ಧನು: ಮಂಗಲ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕಾರ್ಯ ಕ್ಷೇತ್ರದಲ್ಲಿ ಸಹನೆಯಿಂದ ಮುನ್ನಡೆಯಬೇಕು. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು.
 
ಮಕರ: ದೈವಾನುಕೂಲದಿಂದ ಸಾಂಸಾರಿಕವಾಗಿ ಸುಖ ಅನುಭವಿಸುತ್ತೀರಿ. ನಾನಾ ರೀತಿಯಲ್ಲಿ ಆರ್ಥಿಕ ಲಾಭವಾಗಲಿದೆ. ವೃತ್ತಿ ಜೀವನದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಬಂದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವಿರಿ.
 
ಕುಂಭ: ಅನಾರೋಗ್ಯದ ಸಮಸ್ಯೆಗಳಿಗೆ ಶೀಘ್ರ ಮುಕ್ತಿ ಸಿಗುವುದು. ಮನೆಯಲ್ಲಿ ಹೊಸ ಅತಿಥಿಗಳ ಆಗಮನ ಸಂತಸಕ್ಕೆ ಕಾರಣವಾಗುವುದು. ಮಕ್ಕಳಿಂದ ಸಂತಸದ ವಾರ್ತೆ ಸಿಗುವುದು. ಸಂಚಾರದಲ್ಲಿ ಜಾಗ್ರತೆಯಿದೆ.
 
ಮೀನ: ಉದ್ಯೋಗ ರಂಗದಲ್ಲಿ ಮೇಲ್ವರ್ಗದ ಅಧಿಕಾರಿಗಳಿಗೆ ಬಡ್ತಿ ಯೋಗವಿದೆ. ನೂತನ ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಹೊಸ ವ್ಯವಹಾರಗಳಿಗೆ ಕೈಹಾಕುವಿರಿ.ಆರ್ಥಿಕವಾಗಿ ಆದಾಯ ವೃದ್ಧಿಯಾಗುವುದು.
ಇದರಲ್ಲಿ ಇನ್ನಷ್ಟು ಓದಿ :