ಬೇಡದ ದಾಖಲೆಯ ಅಪಾಯದಲ್ಲಿ ಕೆಎಲ್ ರಾಹುಲ್

ಮುಂಬೈ, ಬುಧವಾರ, 10 ಅಕ್ಟೋಬರ್ 2018 (08:28 IST)

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ಟೀಕೆಗೊಳಗಾಗಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಮತ್ತೆ ಅದೇ ತಪ್ಪು ಮಾಡಿದರೆ ಬೇಡದ ದಾಖಲೆಯೊಂದನ್ನು ಮೈಮೇಲೆಳೆದುಕೊಳ್ಳಲಿದ್ದಾರೆ.
 
ಈ ವರ್ಷ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಕುಖ್ಯಾತಿ ಬಾಂಗ್ಲಾ ಬ್ಯಾಟ್ಸ್ ಮನ್ ಮೊಮಿನುಲ್ ಹಕ್ ಹೆಸರಿನಲ್ಲಿದೆ. ಈಗ ಸದ್ಯಕ್ಕೆ ರಾಹುಲ್ ಟಾಪ್ 3 ರೊಳಗೆ ಸ್ಥಾನ ಪಡೆದಿದ್ದಾರೆ.
 
ಒಂದು ವೇಳೆ ಇನ್ನೊಮ್ಮೆ  ಅವರು ಶೂನ್ಯ ಸಂಪಾದಿಸಿದಲ್ಲಿ ಅತೀ ಹೆಚ್ಚು ಶೂನ್ಯ ಸಂಪಾದಿಸಿದ ಕುಖ್ಯಾತಿಗೆ ಒಳಗಾಗಲಿದ್ದಾರೆ. ಈ ವರ್ಷ ರಾಹುಲ್ ಒಟ್ಟು ಎರಡು ಬಾರಿ ಶೂನ್ಯ ಗಳಿಸಿದ್ದು, 6 ಬಾರಿ 10 ಕ್ಕಿಂತ ಕಡಿಮೆ ರನ್ ಸ್ಕೋರ್ ಮಾಡಿದ್ದಾರೆ. ಈಗಾಗಲೇ ಕಳಪೆ ಫಾರ್ಮ್ ನಿಂದಾಗಿ ಟೀಕೆಗೆ ಗುರಿಯಾಗಿರುವ ರಾಹುಲ್ ಗೆ ಈ ಅಪವಾದ ತೊಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಈಗಿನ ಆಯ್ಕೆಗಾರರಿಗೆ ವಿರಾಟ್ ಕೊಹ್ಲಿ, ರವಿಶಾಸ್ತ್ರಿಯನ್ನು ಪ್ರಶ್ನೆ ಮಾಡುವ ಧೈರ್ಯವೇ ಇಲ್ಲವಂತೆ!

ಮುಂಬೈ: ಪ್ರಸಕ್ತಿ ಬಿಸಿಸಿಐ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಗೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತು ...

news

ವಿಂಡೀಸ್ ತಂಡವನ್ನು ಟೀಕಿಸಿ ಇಕ್ಕಟ್ಟಿಗೆ ಸಿಲುಕಿದ ಹರ್ಭಜನ್ ಸಿಂಗ್

ಮುಂಬೈ: ರಾಜ್ ಕೋಟ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಹೀನಾಯವಾಗಿ ...

news

ಧೋನಿ ಮೇಲೆ ಆಕರ್ಷಣೆ ಬೆಳೆಸಿಕೊಂಡ ಈ ಬ್ಯೂಟಿ ಕ್ವೀನ್ ಯಾರು ಗೊತ್ತಾ?

ಮುಂಬೈ: ಕ್ರಿಕೆಟಿಗ ಧೋನಿಯನ್ನು ಇಷ್ಟಪಡುವವರಲ್ಲಿ ಸೆಲೆಬ್ರಿಟಿಗಳೂ ಇದ್ದಾರೆ. ಅವರ ವ್ಯಕ್ತಿತ್ವವೇ ...

news

ವಿಂಡೀಸ್ ತಂಡದ ಗುಣಮಟ್ಟ ನೋಡಿ ದ್ವಿತೀಯ ಪಂದ್ಯಕ್ಕೆ ಟೀಂ ಇಂಡಿಯಾ ತಂಡವೇ ಬದಲು?

ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ಗುಣಮಟ್ಟ ನೋಡಿದ ಮೇಲೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ...

Widgets Magazine