ರಾತ್ರಿ ಊಟದ ಬಳಿಕ ಈ ಆಹಾರಗಳನ್ನು ಸೇವಿಸಲೇಬೇಡಿ

ಬೆಂಗಳೂರು, ಶನಿವಾರ, 7 ಅಕ್ಟೋಬರ್ 2017 (08:18 IST)

ಬೆಂಗಳೂರು: ರಾತ್ರಿ ಊಟವಾದ ಮೇಲೆ ಕೆಲವರಿಗೆ ಒಂದೊಂದು ಸೇವಿಸುವ ಅಭ್ಯಾಸವಿರುತ್ತದೆ. ಆದರೆ ಕೆಲವೊಂದು ಆಹಾರಗಳನ್ನು ಊಟದ ಬಳಿಕ ಸೇವನೆ ಮಾಡುವುದು ಒಳ್ಳೆಯದು.


 
ಹಾಲು
ಹೆಚ್ಚಿನವರು ಊಟವಾದ ಬಳಿಕ ಹಾಲು ಕುಡಿಯುವುದು ಸಾಮಾನ್ಯ. ಆದರೆ ಹಾಲು ಕುಡಿಯುವುದು ಒಳ್ಳೆಯದಲ್ಲ ಎಂದರೆ ನೀವು ನಂಬಲೇ ಬೇಕು. ಊಟದ ಬಳಿಕ ಹಾಲು ಸೇವಿಸುವುದರಿಂದ ಅದರಲ್ಲಿರುವ ಲಾಕ್ಟೋಸ್ ಅಂಶ ನಿಮಗೆ ಜೀರ್ಣ ಸಂಬಂಧಿ ಸಮಸ್ಯೆ ತರಬಹುದು.
 
ಚಾಕಲೇಟ್
ಚಾಕಲೇಟ್ ನಲ್ಲಿರುವ ಕೆಫೈನ್ ಅಂಶ ನಿಮ್ಮ ನಿದ್ರೆಗೆ ಭಂಗ ತರಬಹುದು. ಸಹಜವಾಗಿ ರಾತ್ರಿ ಸರಿಯಾಗಿ ನಿದ್ರೆಯಾಗದಿದ್ದರೆ ಹಗಲು ಕೆಲಸ ಮಾಡಲು ತೊಂದರೆಯಾಗುತ್ತದೆ.
 
ಜ್ಯೂಸ್
ರಾತ್ರಿ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ.  ಹಣ್ಣಿನ ಜ್ಯೂಸ್ ಅಸಿಡಿಕ್ ರಿಯಾಕ್ಷನ್ ಉಂಟು ಮಾಡಬಹುದು. ಇದರಿಂದ ರಾತ್ರಿ ಎದೆಯುರಿಯಂತಹ ಸಮಸ್ಯೆಯಾಗಬಹುದು.
 
ಸೋಡಾ
ಊಟವಾದ ಬಳಿಕ ಸೋಡಾ ಕುಡಿಯುವುದರಿಂದ ಜೀರ್ಣ ಕ್ರಿಯೆ ಹದ ತಪ್ಪಬಹುದು. ಇದರಿಂದ ಅಸಿಡಿಟಿ ಉಂಟಾಗಬಹುದು.
 
ಪಿಜ್ಜಾ
ಪಿಜ್ಜಾ ಎಷ್ಟೇ ಇಷ್ಟ ಎಂದಾಗಿದ್ದರೂ ಊಟದ ಬಳಿಕ ಸೇವಿಸುವುದು ಒಳ್ಳೆಯದಲ್ಲ. ಇದರಲ್ಲಿ ಹೆಚ್ಚು ಕ್ಯಾಲೋರಿಯಿದ್ದು, ಊಟದ ಬಳಿಕ ಸೇವಿಸುವುದರಿಂದ ಅನಗತ್ಯ ಕೊಬ್ಬು ಸಂಗ್ರಹವಾಗಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಲಬದ್ಧತೆಯೇ? ಹಾಗಿದ್ದರೆ ಈ ಆಹಾರ ಸೇವಿಸಿ

ಬೆಂಗಳೂರು: ಮಲಬದ್ಧತೆಯೇ? ವೈದ್ಯರ ಬಳಿ ಹೋಗಿಯೂ ಪ್ರಯೋಜನವಾಗಿಲ್ಲವೇ? ಹಾಗಿದ್ದರೆ ಕೆಲವು ಮನೆ ...

news

ಹಾಲಿನ ಬದಲು ಇವೆರಡನ್ನು ಸೇವಿಸಿದರೆ ಸಾಕು!

ಬೆಂಗಳೂರು: ನಮ್ಮ ಶರೀರಕ್ಕೆ ಕ್ಯಾಲ್ಶಿಯಂ ತೀರಾ ಅನಿವಾರ್ಯ. ಅದು ಹೇರಳವಾಗಿ ಸಿಗುವುದು ಹಾಲಿನಲ್ಲಿ ಎಂದು ...

news

ಕರಿದ ಎಣ್ಣೆಯನ್ನು ಮರುಬಳಕೆ ಮಾಡುತ್ತೀರಾ? ಹಾಗಿದ್ದರೆ ಇದನ್ನು ಓದಿ!

ಬೆಂಗಳೂರು: ನಮ್ಮಲ್ಲಿ ಹೆಚ್ಚಿನವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಇದೇ ತಪ್ಪನ್ನು ಮತ್ತೆ ಮತ್ತೆ ...

news

ಭಾರತದ ಮಹಿಳೆಯರಿಗೆ ಹೃದಯಾಘಾತದ ಅಪಾಯ ಜಾಸ್ತಿ!

ನವದೆಹಲಿ: ಭಾರತದ ಮಹಿಳೆಯರು ಆತಂಕ ಪಡುವ ವಿಷಯವೊಂದು ಇತ್ತೀಚೆಗಿನ ಅಧ್ಯಯನ ವರದಿ ಬಹಿರಂಗಪಡಿಸಿದೆ. ಭಾರತೀಯ ...

Widgets Magazine
Widgets Magazine