ಅವಲಕ್ಕಿ ತಿನ್ನುವುದು ಎಷ್ಟು ಆರೋಗ್ಯಕರ ಗೊತ್ತಾ?

Bangalore, ಗುರುವಾರ, 20 ಜುಲೈ 2017 (08:54 IST)

ಬೆಂಗಳೂರು: ನಮ್ಮ ಬೆಳಗಿನ ಉಪಾಹಾರದಲ್ಲಿ ಅವಲಕ್ಕಿ ಒಂದು ಅವಿಭಾಜ್ಯ ಅಂಗವೇ ಆಗಿ ಬಿಟ್ಟಿದೆ. ಸುಲಭವಾಗಿ ಮಾಡಲು ಸಾಧ್ಯವಾಗುವ ತಿಂಡಿಗಳಲ್ಲಿ ಅವಲಕ್ಕಿ ಉಪ್ಪಿಟ್ಟು ಕೂಡಾ ಒಂದು. ಆದರೆ ಇದು ಎಷ್ಟು ಆರೋಗ್ಯಕರ ಗೊತ್ತಾ?


 
ವಿದೇಶದಿಂದ ಬಂದ ಓಟ್ಸ್,ನೂಡಲ್ಸ್ ನಂತಹ  ವಸ್ತುಗಳು ಭಾರತದಲ್ಲಿ ಜನಪ್ರಿಯವಾಗುವ ಮೊದಲೇ ಅವಲಕ್ಕಿಯೇ ನಂ.1 ಸ್ಥಾನದಲ್ಲಿತ್ತು. ಅವಲಕ್ಕಿ ತಿನ್ನುವುದು ನಮ್ಮ ದೇಹಕ್ಕೆ ಓಟ್ಸ್ ನಷ್ಟೇ ಉತ್ತಮ. ಅವಲಕ್ಕಿಯಲ್ಲಿ ಶೇ. 76 ರಷ್ಟು ಕಾರ್ಬೋಹೈಡ್ರೇಟ್ ಅಂಶವಿದೆ. 23 ಶೇ. ಕೊಬ್ಬಿನಂಶವಿದೆ.
 
ಇದರಲ್ಲಿ ವಿಟಮಿನ್ ಬಿ ಅಂಶ ಹೇರಳವಾಗಿರುವುದರಿಂದ ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ.  ಅವಲಕ್ಕಿಯಲ್ಲಿ ಪೋಷಕಾಂಶಗಳು ಏನೂ ಇಲ್ಲದಿದ್ದರೂ, ಅದಕ್ಕೆ ಕೊಂಚ ತರಕಾರಿ ಹಾಕಿ ಉಪ್ಪಿಟ್ಟು ಮಾಡಿಕೊಂಡು ತಿನ್ನುವುದರಿಂದ ರುಚಿಕರ ಮತ್ತು ಆರೋಗ್ಯಕರವಾಗುವುದು ಅಕ್ಕಿ ಬಳಸಿ ಮಾಡುವುದರಿಂದ ಇದು ಬೇಗನೇ ಜೀರ್ಣವಾಗುವುದು.
 
ಇದರಲ್ಲಿ ವಿಟಮಿನ್ ಬಿ ಜತೆಗೆ ವಿಟಮಿನ್ ಎ, ಕಬ್ಬಿಣದಂಶ, ಕ್ಯಾಲ್ಶಿಯಂ, ಪೋಸ್ಪರಸ್ ಇರುವುದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಮತ್ತೇಕೆ ತಡ? ಬೆಳಗಿನ ಉಪಾಹಾರಕ್ಕೆ ಚಿಂತೆಯಿಲ್ಲದೆ ಉಪ್ಪಿಟ್ಟು ಮಾಡಿ ತಿನ್ನಿ!
 
ಇದನ್ನೂ ಓದಿ..  ಕೊನೆಗೂ ರಾಜಮೌಳಿಗೆ ಗ್ರೀನ್ ಸಿಗ್ನಲ್ ಕೊಟ್ಟರಾ ಶ್ರೀದೇವಿ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಅವಲಕ್ಕಿ ಆಹಾರ ಆರೋಗ್ಯ Poha Food Health

ಆರೋಗ್ಯ

news

ದಿನವೊಂದಕ್ಕೆ ಮಹಿಳೆಯರು ಸೆಕ್ಸ್ ಬಗ್ಗೆ ಅದೆಷ್ಟು ಬಾರಿ ಯೋಚಿಸುತ್ತಾರೆ ಗೊತ್ತೇ?

ಬೆಂಗಳೂರು: ಮಹಿಳೆಯರು ಲೈಂಗಿಕ ವಿಷಯಗಳ ಬಗ್ಗೆ ಹೆಚ್ಚು ಮಾತಾಡಿಕೊಳ್ಳಲ್ಲ. ಈ ವಿಚಾರದಲ್ಲಿ ಬಹಳ ಮಡಿವಂತಿಕೆ ...

news

ಆಪಲ್ ನ ಬೀಜ ತಿಂದರೆ ಜೀವಕ್ಕೇ ಕುತ್ತು!

ಬೆಂಗಳೂರು: ಆಪಲ್ ಪ್ರತಿದಿನ ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ. ಆದರೆ ಆಪಲ್ ಬೀಜ ...

news

ಮಹಿಳೆಯರು ಕೇವಲ ಒಂದು ನಿಮಿಷ ಓಡಿದ್ರೆ ಸಾಕು: ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತವನ್ನು ತಡೆಯಬಹುದು

ಮಹಿಳೆಯರು ಪ್ರತಿದಿನ ಕೇವಲ ಒಂದು ನಿಮಿಷ ಓಡಿದ್ರೆ ಸಾಕು ಮೂಳೆಗಳು ಸದೃಢಗೊಳ್ಳುತ್ತಂತೆ.

news

ಡಯಾಬಿಟಿಕ್ ಪೇಶಂಟ್ಸ್ ಹಾಕಿಕೊಳ್ಳಲೇ ಬೇಕು ಈ ವಿಶಿಷ್ಟ ಟ್ಯಾಟೂ

ಟ್ಯಾಟೂ ಹಾಕಿಸಿಕೊಳ್ಳೋದು ಒಂದು ರೀತಿಯ ಫ್ಯಾನ್ ಆಗಿದೆ. ಆದರೆ ಕೆಲವೊಂದು ಟ್ಯಾಟೂ ನಿರ್ಧಿಷವಾದ ...

Widgets Magazine